ಪಣಜಿ: ಗೋವಾ ಕನ್ನಡ ಸಮಾಜ ಪಣಜಿಯಲ್ಲಿ ಸ್ವಂತ ಕಛೇರಿ ಹೊಂದುವ ಕನಸನ್ನು ನನಸಾಗಿಸಿಕೊಂಡಿದೆ, ಇದು ಹೆಮ್ಮೆಯ ವಿಷಯ. ಕನ್ನಡ ಸಮಾಜದ ಅಧ್ಯಕ್ಷ ಸ್ಥಾನ ಎಂಬುದು ಬಹುದೊಡ್ಡ ಜವಾಬ್ದಾರಿ. ಈ ಸ್ಥಾನ ಅಲಂಕರಿಸುವವರು ಕನ್ನಡ ಸಮಾಜ ಮುನ್ನಡೆಸುವ ಪ್ರಮುಖ ಜವಾಬ್ದಾರಿ ಅವರ ಹೆಗಲ ಮೇಲೆ ಇರುತ್ತದೆ ಎಂದು ಗೋವಾ ರಾಜ್ಯ ಸರ್ಕಾರದ ನಿವೃತ್ತ ನಿರ್ದೇಶಕ ಸುರೇಶ್ ಶಾನಭೋಗ್ ನುಡಿದರು.
ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೆಝಸ್ ಬ್ರಗಾಂಝ ಸಭಾಗೃಹದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆ-2024 ರ ಉದ್ಘಾಟನೆ ನೆರವೇರಿಸಿ ಗೋವಾ ಕನ್ನಡ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಗೋವಾ ಕನ್ನಡ ಸಮಾಜದ ನೂತನ ಅಧ್ಯಕ್ಷರಾಗಿ ಅರುಣಕುಮಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಪೈ, ಅಖಿಲಾ ಕುರಂದವಾಡ, ಕಾರ್ಯದರ್ಶಿಯಾಗಿ ಶ್ರೀಕಾಂತ ಲೋಣಿ, ಸಹಕಾರ್ಯದರ್ಶಿ ಪ್ರಹ್ಲಾದ್ ಗುಡಿ, ಗಣೇಶ ಹೆಗಡೆ, ಖಜಾಂಚಿ ಸಂದೇಶ ಗಾಡವಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ-ಶಂಶುದ್ಧೀನ್ ಸೊಲ್ಲಾಪುರ, ಸಿ.ಜಿ.ಕಣ್ಣೂರ್, ನಿರಂಜನ್, ಸುನೀಲ್ ಕುಮಠಳ್ಳಿ, ಪ್ರಕಾಶ ಭಟ್, ನೀರಜ್ ದಿವಾಕರ್ ಆಯ್ಕೆಯಾಗಿದ್ದಾರೆ.
ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅರುಣಕುಮಾರ ಕಳೆದ ವರ್ಷದ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಖಜಾಂಚಿ ಪ್ರಕಾಶ ಯಡಳ್ಳಿ ಕಳೆದ ವರ್ಷದ ಆಯ-ವ್ಯಯ ಮಂಡಿಸಿದರು. ಅಕ್ಷತಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ನವೀನ್ ಶೆಟ್ಟಿ ಹಾಗೂ ಸ್ಮಿತಾ ಬಗಲಿ ಕನ್ನಡ ಸುಮಧುರ ಗೀತೆಗಳನ್ನು ಹಾಡಿದರು. ಅರುಣಕುಮಾರ್ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ