ಗೋವಾ ತುಳು ಕೂಟ ಅಧ್ಯಕ್ಷರಾಗಿ ಇರ್ವತ್ತೂರು ಗಣೇಶ್ ಶೆಟ್ಟಿ ಆಯ್ಕೆ

Upayuktha
0


ಪಣಜಿ: ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಗೋವಾ ತುಳು ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.


ಗೋವಾದಲ್ಲಿ 2000 ಕ್ಕೂ ಹೆಚ್ಚು ಜನ ತುಳುವರು ವಿವಿಧ ಉದ್ಯಮ ಉದ್ಯೋಗದಲ್ಲಿ ತೊಡಗಿದ್ದು ಅವರನ್ನೆಲ್ಲ ಒಟ್ಟು ಸೇರಿಸುವ ನಿಟ್ಟಿನಲ್ಲಿ ತುಳು ಕೂಟ ರಚನೆಯಾಗಿದೆ. ಗೋವಾ ರಾಜಧಾನಿ ಪಣಜಿಯಲ್ಲಿ ಅಗಷ್ಟ 27 ರಂದು ನಡೆದ ಸಭೆಯಲ್ಲಿ ಗಣೇಶ್ ಶೆಟ್ಟಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.


ಗಣೇಶ ಶೆಟ್ಟಿ ಅವರು ಕಾರ್ಕಳ ಹಾಗೂ ಗೋವಾದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಟ್ಲ ಫೌಂಡೇಶನ್ ಗೋವಾದ ಅಧ್ಯಕ್ಷರಾಗಿರುವ ಇವರು ಗೋವಾ ಬಂಟ್ಸ್‌ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಇರ್ವತ್ತೂರು ಶಾಲಾ ಶತಮಾನೋತ್ಸವ ಸಮೀತಿ ಮುಂಬಯಿ ಕಾರ್ಯದರ್ಶಿಯಾಗಿ ಸಾಣೂರು ಗರಡಿ ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುರತ್ತಂಗಡಿ ಭಕ್ತವತ್ಸಲ ಸಮಿತಿಯ ಅಧ್ಯಕ್ಷರಾಗಿ ಕಳೆದ 27 ವರ್ಷಗಳಿಂದ ಸಮೀತಿಯನ್ನು ನಡೆಸಿಕೊಂಡು ಬಂದಿರುವ ಇವರು ಪ್ರತಿವರ್ಷ ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತಿತರ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.


ಗೋವಾ ತುಳು ಕೂಟಕ್ಕೆ ಗೌರವ ಅಧ್ಯಕ್ಷರಾಗಿ ಚಂದ್ರಹಾಸ ಅಮಿನ್ ಬಂಟ್ವಾಳ, ಉಪಾಧ್ಯಕ್ಷರಾಗಿ ಶಶಿಧರ ರೈ ಪುತ್ತೂರು, ಪ್ರಕಾಶ ಪೂಜಾರಿ ಮಡಿಕೇರಿ, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ ಪೂಜಾರಿ ಪಣಿಯೂರು, ಕಾರ್ಯದರ್ಶಿಯಾಗಿ ಶಶಿಧರ ನಾಯ್ಕ ಬೋಂದೆಲ್, ಕೋಶಾಧಿಕಾರಿಯಾಗಿ ಸಿಎ ಪ್ರಶಾಂತ ಜೈನ್ ಇರ್ವತ್ತೂರು, ಸಹಕಾರ್ಯದರ್ಶಿಯಾಗಿ ಶ್ರೀಕಾಂತ ಅಮಿನ್, ಸಹ ಕೋಶಾಧಿಕಾರಿಯಾಗಿ ಅಪ್ಪಾಜಿ ಶೆಟ್ಟಿ ಆಯ್ಕೆಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top