ಬಾಗಲಕೋಟೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಯೋಗದಲ್ಲಿ ರೋಟರಿ ಬೆಂಗಳೂರು ಎಚ್ ಎಸ್ ಆರ್ ಕ್ಲಬ್ ಆಯೋಜಿಸಿದ್ದ ಸೈನಿಕರೊಂದಿಗೆ ರಕ್ಷಾಬಂಧನದ ಸಂದರ್ಭದಲ್ಲಿ ಬೆಂಗಳೂರಿನ ಯಶವಂತಪುರದ ನಿವಾಸಿ ಸಮಾಜ ಸೇವಕ ಅಪ್ರೋಜ ಪಾಷಾ, ಅವರನ್ನು ಸಂಘದ ಪ್ರಮುಖರಾದ ಡಾ. ಶಿವಣ್ಣ ಎಂ ಕ್ಯಾಪ್ಟನ್ ಗುರು ನಾಯಕ್ ಕ್ಯಾಪ್ಟನ್ ವೀರಪ್ಪ ಮೇಜರ್ ವಿನಾಯಕ್ ಇತರೆ ಸದಸ್ಯರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ರೋಚ್ ಪಾಷಾ, ಸಮಾಜಕ್ಕೆ ವಿವಿಧ ರೀತಿಯಲ್ಲಿ ನನ್ನ ವಿಶ್ವಾಸ ಸೇವೆಯನ್ನು ಗುರುತಿಸಿ ನನ್ನನ್ನು ಸನ್ಮಾನಿಸಿದ ಸಂಘದ ಪದಾಧಿಕಾರಿಗಳಿಗೆ ಕೃತ೯ಥನಾಗಿದ್ದೇನೆ ಎಂದರಲ್ಲದೆ ಸಮಾಜ ಸೇವೆ ಮಾಡಲು ಬಡವರ ದೀನದಲಿತರ ಪರವಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದು ಎಂದರು.
ಸನ್ಮಾನದಿಂದ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಇನ್ನೂ ಸಮಾಜ ಸೇವೆ ಮಾಡಲೆಂದು ಪ್ರೋತ್ಸಾಹಿಸಲು ನನ್ನನ್ನು ಸನ್ಮಾನ ಮಾಡಿದ್ದಿರೆಂದು ನಾನು ಅಂದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ರಾಷ್ಟ್ರಕ್ಕಾಗಿ ಸಾಯಲು ಸಿದ್ದರಾಗಿರುವ ಸೈನಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು, ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಶ್ರಮಿಸಿದ್ದೇವೆ ಎಂಬುದನ್ನು ತಿಳಿದುಕೊಂಡು ಎಲ್ಲರೂ ದೇಶಾಭಿಮಾನವನ್ನು ರೂಡಿಸಿಕೊಳ್ಳುವುದು ಇಂದು ಅವಶ್ಯವಾಗಿದೆ. ಇಂದಿನ ಯುವಕರಲ್ಲಿ ರಾಷ್ಟ್ರ ಅಭಿಮಾನವನ್ನು ರೂಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ