ಬಳ್ಳಾರಿ:ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ನಿಂದ ಓದುವ ಅಭಿಯಾನಕ್ಕೆ ಚಾಲನೆ

Upayuktha
0


ಬಳ್ಳಾರಿ:
ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಸಹಯೋಗದೊಂದಿಗೆ ಬಳ್ಳಾರಿ ಪಶ್ಚಿಮ, ಕುರುಗೋಡು ತಾಲ್ಲೂಕಿನ ಪಾರ್ವತಿ ನಗರ ಕ್ಲಸ್ಟರ್ ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾರ್ವತಿ ನಗರ ಎರಡನೇ ಅಡ್ಡರಸ್ತೆಯ ಶಾಲೆಯಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ಓದುವ ಅಭಿಯಾನಕ್ಕೆ ಚಾಲನೆ ಮತ್ತು ಉದ್ಘಾಟನೆ ನೀಡಲಾಯಿತು. 


ಆಗಸ್ಟ್ 15 ರಿಂದ ಸೆಪ್ಟೆಂಬರ್ 8 ರವರೆಗೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸಲು ಹಾಗೂ ಪ್ರಾಥಮಿಕ ಹಂತದಲ್ಲಿಯೇ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಕುರಿತು ಜಾಗೃತಿಯನ್ನು ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಅವುಗಳಲ್ಲಿ ಸಮುದಾಯದಲ್ಲಿ ಅರಿವು ಮೂಡಿಸಲು ಜಾಥಾ, ಬೀದಿ ನಾಟಕ, ಹಾಗೂ ಪ್ರತಿದಿನ ಒಂದು ಗಂಟೆ ಓದಲು ಮಿಸಲಿಡುವುದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ ಬಿ ಜಿ ಕ್ಷೇತ್ರ ಸಂಪನ್ಮೂಲ ಅಧ್ಯಕ್ಷತೆ ವಹಿಸಿಕೊಂಡು ಉದ್ಘಾಟನೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಹಾಗೂ ಮಕ್ಕಳಿಗೆ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಬೇಕೆಂದು ತಿಳಿಸಿದರು.


ಸಿರ‍್ಪಿ ಡಿ.ಶಿವಮ್ಮ ಕಾರ್ಯಕ್ರಮದ ಕುರಿತು ಹಿತನುಡಿಗಳನ್ನಡಿದರು. ಶಾಲಾ ಮುಖ್ಯ ಶಿಕ್ಷಕಿ ಲೀಮರೋಜ ರವರು ಗ್ರಂಥಾಲಯದ ಪುಸ್ತಕಗಳನ್ನು ಬಳಸಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಎಂದು ತಿಳಿಸಿದರು. ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ನ ತಾಲ್ಲೂಕು ಕಾರ್ಯಕ್ರಮ ಸಂಯೋಜಕಿಯಾದ ಶೃತಿ ಗಡಾದ ರವರು ಓದುವ ಅಭಿಯಾನ ಕಾರ್ಯಕ್ರಮದ ಉದ್ದೇಶ ಹಾಗೂ ಮಕ್ಕಳು ಪ್ರಾರಂಭದಲ್ಲಿಯೇ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಎಂದು ತಿಳಸಿದರು.


ಬೋರಮ್ಮ ಕೆಂಭಾವಿ ಶಿಕ್ಷಕರು ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರು ಇವರು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.ಶಾಲಾ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top