ರಾಘವೇಂದ್ರ ಸ್ವಾಮಿಗಳಲ್ಲಿರುವ ಪೂಜ್ಯತೆಯನ್ನು ಅಪ್ಪಣಾಚಾರ್ಯರು ಮೊಟ್ಟ ಮೊದಲ ಸ್ಥಾನದಲ್ಲಿ ಪೂಜ್ಯಾಯ ಎಂಬ ವಿಶೇಷತೆಯನ್ನು ಇಟ್ಟು ಕೊಂಡಾಡುತ್ತಾರೆ. ಸತ್ಯಧರ್ಮ ರತರಾಗಿದ್ದಾರೆ, ಭಜಿಸುವವರಿಗೆ ಕಲ್ಪವೃಕ್ಷದಂತೆ ಇದ್ದಾರೆ, ನಮಿಸುವವರಿಗೆ ಕಾಮಧೇನುಗಳಾಗಿದ್ದಾರೆ, ದುರ್ವಾದ್ವಾಂತವನ್ನು ಓಡಿಸುವುದರಲ್ಲಿ ಸೂರ್ಯನಂತಿದ್ದಾರೆ, ಸಜ್ಜನರೆಂಬ ಕಮಲಗಳಿಗೆ ಚಂದ್ರನಂತೆ ಇದ್ದಾರೆ. ಇವೆಲ್ಲ ಗುಣಗಳು ಇದ್ದರೂ ಪೂಜ್ಯತೆಗೆ ಪೂಜ್ಯತೆಯನ್ನು ತಿಳಿಸಿದ್ದಾರೆ ಅದರ ಹಿನ್ನೆಲೆ ಮಹಾಭಾರತ, ನಾರಾದರು ಶ್ರೀಕೃಷ್ಣ ಪರಮಾತ್ಮನ ಮುಂದೆ ಹೇಳಿದ್ದನ್ನು ಯುಧಿಷ್ಠಿರನಿಗೆ ಹೇಳಿದ್ದನ್ನು ಮಹಾಭಾರತದಲ್ಲಿ ಪೂಜ್ಯತೆಗೆ ಕಾರಣ ಹೇಳಿದಂತೆಯೇ ರಾಘವೇಂದ್ರ ಸ್ವಾಮಿಗಳು ಭಕ್ತಿಯಿಂದ ಭಕ್ತಿಯಿಂದ ಮಾಡಬೇಕಾದ ಪೂಜೆಯನ್ನು ಮಾಡುತ್ತಿದ್ದರು.
ವೈಚಾರಿಕತೆಯಿಂದ ಮಾತನಾಡುವವರು ಭಕ್ತಿಯಿಂದ ಮಾಡಿದರೆ ಸಾಕು ಅಲ್ಲವೇ ಎನ್ನುತ್ತಾರೆ. ಆದರೆ ಮಹಾಭಾರತದಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ, ಭಗವಂತನ ಪೂಜೆಯನ್ನು, ದೇವಕಾರ್ಯ ಮಾದುವಾಗ ಶುದ್ಧವಾದ ಮನಸ್ಸಿನಿಂದ ಪರಿಶುದ್ಧವಾಗಿ ಏಕಾಗ್ರ ಮನಸ್ಸಿನಿಂದ ಮಾಡಬೇಕು ನಿರಂತರ ಪೂಜೆಯನ್ನು ಮಾಡಿ ಅನುಗ್ರಹ ಪಡೆದವರು ಮಹಾನುಭಾವರಾದ ಪೂಜ್ಯಾಯ ರಾಘವೇಂದ್ರಾಯ, ಎರಡು ರೀತಿಯ ಪೂಜೆಯನ್ನು ಮಾಡುತ್ತಿದ್ದರು ನಿತ್ಯ ಮಾಡುವ ಪೂಜಾ ಕಾರ್ಯ ಜೊತೆಗೆ ಜ್ಞಾನ ಕಾರ್ಯ ಮಾಡಬೇಕು ಅಂತಹ ಜ್ಞಾನ ಕಾರ್ಯವನ್ನು ವಿಶೇಷವಾಗಿ ಮಾಡಿದರು. ದೇವರಿಗೆ ಶ್ರೇಷ್ಠವಾದ ಮಂಜರಿ ಎನ್ನುವ ತುಳಸಿಯನ್ನು ಅರ್ಪಿಸಬೇಕೆಂದು ತತ್ವ ಮಂಜರಿಯನ್ನು ಅರ್ಪಿಸಿದರು. ನೇವೈದ್ಯ ಮಾಡುವ ಸಲುವಾಗಿ ಭಕ್ತಿಯಿಂದ ದೀಪವನ್ನು ಕೂಡ ಸಮರ್ಪಣೆ ಮಾಡಬೇಕು ನ್ಯಾಯದೀಪ ಭಾವದೀಪ ಎಂಬ ಗ್ರಂಥವನ್ನು ನಂತರ ಪ್ರಕಾಶಯನ್ನುವ, ನಂತರವಾದ ಗಂಧವನ್ನು ಸೂಸುವ ಪರಿಮಳವನ್ನು ಅರ್ಪಿಸಿದರು. ತಂಜಾವೂರಿನ ರಾಜನ ಮುತ್ತಿನ ಹಾರವನ್ನು ತಿರಸ್ಕರಿದರೂ ನ್ಯಾಯ ಮುಕ್ತಾವಲಿ ಎಂಬ ಗ್ರಂಥವನ್ನು ಅರ್ಪಿಸಿದರು ತಂತ್ರದೀಪಿಕಾ ಎಂಬ ಗ್ರಂಥದಿಂದ ಮಂಗಳಾರತಿ. ಇಷ್ಟೆಲ್ಲಾ ಮಾಡಿದ ರಾಯರು ತಮ್ಮ ಬಗೆಗೆ ಏನೂ ಹೇಳಿಕೊಂಡಿಲ್ಲ ಈ ಮಾತನ್ನು ಮಹಾಭಾರತದಲ್ಲಿ ಬರುತ್ತದೆ. ಎಲ್ಲವೂ ಪರಮಾತ್ಮನ, ವಾಯುದೇವರ, ಶ್ರೀಮದಾಚಾರ್ಯರು, ಟೀಕಾಚಾರ್ಯರ ಅನುಗ್ರಹದಿಂದ ಮಾಡಿದ್ದೇವೆ ಎಂದು ಹೇಳುವ ವಿನಯವಂತರು ರಾಘವೇಂದ್ರ ಸ್ವಾಮಿಗಳು.
ಭಾಗವತದಲ್ಲಿ ನಾರದರು ಹೇಳಿದ್ದೂ ತೃಪ್ತಿ ಇರಬೇಕು ಎಂದು. ಆಸೆ ಎಂದಿಗೂ ಜೀರ್ಣವಾಗುವುದಿಲ್ಲ ಮನುಷ್ಯನಾದನು ಜೀರ್ಣನಾಗುತ್ತಾನೆ. ಆಸೆಯನ್ನು ಗೆದ್ದವರು ಪೂಜ್ಯರಾಗುತ್ತಾರೆ. ಸಂತೃಪ್ತರಾದವರು, ಕ್ಷಮಾಗುಣ ಇರುವವರು ಅಂತಹವರನ್ನು ನಮಸ್ಕರಿಸುತ್ತೇನೆ, ಸತ್ಯ ಧರ್ಮ ರತಾಯಚರನ್ನು ನಮಸ್ಕರಿಸುತ್ತೇನೆ ಎಂದು ನಾರದರು ಹೇಳಿದ್ದರಲ್ಲಿ ನಾವು ಕಾಣಬಹುದು. ಯಜ್ಞ ಯಾಗಾದಿಗಳನ್ನು ಮಾಡಿದವರು, ಸನ್ಯಾಸಿಗಳಾದ ಮೇಲೆ ಜ್ಞಾನ ಯಾಗವನ್ನು ಮಾಡುವವರು ರಾಘವೇಂದ್ರರು ಮಾಡಿದ್ದಾರೆ ಅವರಿಗೆ ಹೇಳಿದಂತೆಯೇ ಇರುವುದರಿಂದ ಅವರು ಪೂಜ್ಯರು.
ಗೋ ಬ್ರಾಹ್ಮಣ ಪರಿಪಾಲಕರಾದವರಿಗೆ ನಮಸ್ಕರಿಸುತ್ತೇನೆ ಎನ್ನುತ್ತಾರೆ ನಾರದರು, ರಾಘವೇಂಧ್ರ ಸ್ವಾಮಿಗಳು ಯಜ್ಞ ಯಾಗಾದಿಗಳನ್ನು ಮಾಡಿದ್ದಾರೆ ಜಗತ್ತಿನಲ್ಲಿ ಎಲ್ಲರಿಗೂ ಅನ್ನದಾನ ಮಾಢಿದ ಪುಣ್ಯ ಸಂಪಾದನೆ ಮಾಡಿ ಪುಣ್ಯ ಬರುತ್ತದೆ. ಧರ್ಮಕಾರ್ಯಗಳನ್ನು ಜನರು ಮಾಡುವ ಪುಣ್ಯದಲ್ಲಿ ಭಾಗವನ್ನು ಪಡೆಯಬಹುದು ಎಂದು ರಾಯರು ತಮ್ಮ ಗೀತಾ ವಿವೃತಿಯಲ್ಲಿ ಹೇಳುತ್ತಾರೆ. ಇಂದ್ರಿಯ ನಿಗ್ರಹ ಮಾಡಿದವರು ಸತ್ಯಧರ್ಮಗಳ ಪಾಲನೆ ಮಾಢುವವರು ಭೂ ಗೋ ರಕ್ಷಣೆ ಮಾಡುವವರಿಗೆ ಅನುಗ್ರಹ ಮಾಡುತ್ತಾನೆ. ರಾಘವೇಂದ್ರ ಸ್ವಾಮಿಗಳು ಪರಮಾತ್ಮನ ಮೂಲಕ ಇಷ್ಟೆಲ್ಲಾ ನಮಗೆ ದಾನ ಮಾಡಿ ಪುಣ್ಯವಂತರಾಗಿದ್ದಾರೆ ಅದಕ್ಕೆ ಪೂಜ್ಯರು.
ನಮಸ್ಕಾರ ಎಂದರೆ ಜ್ಞಾನ ಭಕ್ತಿ ವೈರಾಗ್ಯ, ಯಜ್ಞ ದಾನ ತಪಸ್ಸು ಶ್ರವಣ ಮನನ ನಿಧಿ ಧ್ಯಾಸನ ಇದೆಲ್ಲದರಲ್ಲೂ ನಾವು ನಿಮಗಿಂತ ಕಿರಿಯರು ಎಂದು ತಿಳಿದವರು ಹಿರಿಯರಿಗೆ ನಮಸ್ಕಾರ ಮಾಡುತ್ತೇವೆ ಆದ್ದರಿಂದ ಹಿರಿಯರಿಗೆ ನಮಸ್ಕಾರ ಮಾಡಬೇಕು. ನಮಗಿಂತ ಎಲ್ಲದರಲ್ಲೂ ಹಿರಿಯರಿಗೆ ನಮಸ್ಕಾರ ಮಾಡಬೇಕು. ನಮ ಎಂದರೆ 3 ಲಘು ಎಂದರೆ ನಗಣ್ಯ, 3 ಗುರು ಎಂದರೆ ಮಗಣ ಇರುವುದು. ಆದ್ದರಿಂದ ಜ್ಞಾನವು ನಮ್ಮಲ್ಲಿ ಕಡಿಮೆ ಇದ್ದು ನಿಮ್ಮಲ್ಲಿ ಹೆಚ್ಚಾಗಿರುವುದರಿಂದ ನಾವು ನಿಮಗೆ ನಮಸ್ಕಾರ ಮಾಡಬೇಕು ಎಂದು ಹೇಳುತ್ತಾರೆ ಅದು ನಿಜವಾದ ನಮಸ್ಕಾರ ಇದನ್ನು ಅನುಸಂಧಾನದಲ್ಲಿ ತಂದು ಕೊಂಡು ನಮಸ್ಕಾರ ಮಾಡಬೇಕು.
ಯಾರು ಜಿಹ್ವಾ ಚಾಪಲ್ಯವನ್ನು ಗೆದ್ದಿರುವರೋ ಅವರು ಪೂಜ್ಯರು ಎಂದು ಹೇಳುತ್ತಾರೆ. ಯಾರು ನಾಳೆಯ ಸಲುವಾಗಿ ಏನನ್ನೂ ಎತ್ತಿಡದೇ ಇರುವವರೋ, ಹೆಚ್ಚು ಕಾಲ ಉಪವಾಸ ಮತ್ತೆ ಆಹಾರ ಸಿಕ್ಕಾಗ ಊಟ ಮಾಡುತ್ತಿರುತ್ತಾರೆಯೋ ಪೂಜ್ಯರು ಎಂದು ಮಹಾಭಾರತದಲ್ಲಿ ಹೇಳಿದ್ದಾರೆ. ರಾಘವೇಂದ್ರ ಸ್ವಾಮಿಗಳು ಕೂಡ ಇದೆ ರೀತಿಯಲ್ಲಿ ಇದ್ದವರು ಅಸಂಚಯರು ಆದರೆ ಕ್ರಿಯಾಶೀಲರು ಊಟವಿಲ್ಲ ಎಂದು ಇದ್ದರೂ ತಮ್ಮ ಕರ್ತವ್ಯಗಳನ್ನು ಬಿಡದೇ ಪೂಜೆ ಪಾಠ ಮೊದಲಾದ ಕಾಯಗಳನ್ನು ಮಾಡುತ್ತಿದ್ದರು. ಸೇವಕರ ಸೌಖ್ಯವನ್ನು ನೋಡಿ ಕೊಳ್ಳುವವರು ಪೂಜ್ಯರು ಶ್ರೀಮದಾಚಾರ್ಯರು ಹೇಳಿದ್ದಾರೆ. ಭಕ್ತರು ಅವರನ್ನು ನಂಬಿ ಸೇವೆ ಮಾಡುವವರಿಗೆ ಬೇಡಿದ ಇಷ್ಟಾರ್ಥಗಳನ್ನು ಕೊಟ್ಟು ರಕ್ಷಣೆ ಮಾಡುತ್ತಿದ್ದಾರೆ ರಾಯರು. ರಾಯರು ಎಲ್ಲ ರೋಗಗಳ ಪರಿಹಾರ ಮಾಢುವವರು ದೇವರು ಗುರುಗಳ ಸ್ಮರಣೆ ಮಾಡಿದರೆ ರೋಗ ಪರಿಹಾರವಾಗುತ್ತದೆ. ಅತಿಥಿಗಳ ಸತ್ಕಾರ ಮಾಡುವವರು ಪೂಜ್ಯರು, ದೇವತೆಗಳಿಗೆ ಅರ್ಪಸಿದ ಶೇಷವನ್ನು ಸೇವಿಸಿದವರು ಪೂಜ್ಯರು ಎಂದು ಹೇಳುತ್ತಾರೆ. ಇರುವ ವರೆಗೂ ಪೂಜನೀಯ ಗುಣಗಳಿಂದ ಇದ್ದೂ ಈಗಲೂ ಸಹ ಧರ್ಮ ಕಾರ್ಯಗಳನ್ನು ತಮ್ಮ ಶಿಷ್ಯರ ಮೂಲಕ ಮಾಡಿಸುತ್ತಿರುವ ಗುರುಗಳು ನಮಗೆ ಯೋಗ್ಯವಾದ ಧರ್ಮ ಕಾರ್ಯಮಾಡುವ ಶಕ್ತಿಯನ್ನು ಕೊಡಲಿ
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ