ಬಳ್ಳಾರಿ:ಅಂಚೆ ಇಲಾಖೆಯಿಂದ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ ಸ್ಪರ್ಶ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಅಂಚೆ ಚೀಟಿಗಳ ಮೌಲ್ಯ ಮತ್ತು ಸಂಶೋಧನೆಯ ಕುರಿತಾದ ಹವ್ಯಾಸವನ್ನು ಬೆಳೆಸಲು ವಿದ್ಯಾರ್ಥಿವೇತನ ನೀಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜನ ಅ ಮೂಲಕ ಸದಾಭಿರುಚಿಯ ಅರೋಗ್ಯ ಪೂರ್ಣ ಜ್ಞಾನಧಾರಿತ ಹವ್ಯಾಸ ರೂಡಿಸುವುದು ವಿದ್ಯಾರ್ಥಿವೇತನದ ಉದ್ದೇಶವಾಗಿದೆ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು ಮತ್ತು ಅಂಚೆ ಚೀಟಿಗಳ ಠೇವಣಿ ಖಾತೆಯನ್ನು ಅಥವಾ ಶಾಲೆಗಳ ಅಂಚೆ ಚೀಟಿ ಕ್ಲಬ್ನಲ್ಲಿ ಸದಸ್ಯರಾಗಿರಬೇಕು. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಮತ್ತು ಯೋಜನೆ ಕಾರ್ಯದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಸೆ.3 ಕೊನೆಯ ದಿನಾಂಕವಾಗಿದ್ದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಂತರ್ಜಾಲ ವೇದಿಕೆಗೆ ಭೇಟಿ ನೀಡಬಹುದು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮತ್ತು ಶಾಲೆಗಳು ಸಂಪರ್ಕ ಸಂಖ್ಯೆಗಳಾದ 9880979730 , 9480722701, 08392-266037 ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ