ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಡಾ ಎಸ್.ಎಲ್ ಭೈರಪ್ಪ ಭೇಟಿ, ಡಾ ಬನ್ನಂಜೆ ಪುತ್ಥಳಿಗೆ ಮಾಲಾರ್ಪಣೆ

Upayuktha
0


ಉಡುಪಿ: ಆವರಣ, ಪರ್ವ ಮುಂತಾದ ಅತ್ಯದ್ಭುತ ಕೃತಿಗಳ ಕರ್ತೃ, ಶ್ರೇಷ್ಠ ಕಾದಂಬರಿಕಾರರಾದ ಪದ್ಮಭೂಷಣ ಪುರಸ್ಕೃತ ಡಾ|| ಎಸ್.ಎಲ್. ಬೈರಪ್ಪ ಅವರು ಇಂದು (ಆ.28) ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಉಡುಪಿ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದರು.


ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್, ಹಿರಿಯ ಸಾಹಿತಿ ಲೇಖಕ ಪ್ರಧಾನ್ ಗುರುದತ್, ಗ್ರಂಥಾಲಯ ಅಧಿಕಾರಿಗಳಾದ ನಳಿನಿ, ಜಯಶ್ರೀ, ಡಾ.ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರಿದ್ದು ಡಾ ಭೈರಪ್ಪನವರನ್ನು ಆದರದಿಂದ ಬರಮಾಡಿಕೊಂಡರು.


ಗ್ರಂಥಾಲಯದ ವಿವಿಧ ವಿಭಾಗಗಳನ್ನು ಸಂದರ್ಶಿಸಿ ಗ್ರಂಥಾಲಯದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತು ಸಂದರ್ಶಕರ ಪುಸ್ತಕದಲ್ಲಿ ಸ್ವಹಸ್ತಾಕ್ಷರದಲ್ಲಿ ದಾಖಲಿಸಿದರು. ಡಾ ಬನ್ನಂಜೆಯವರ ಪುತ್ಥಳಿಗೆ ಡಾ ಭೈರಪ್ಪನವರು ಮಾಲಾರ್ಪಣೆಗೈದ ಬಳಿಕ ಗ್ರಂಥಾಲಯದ ವತಿಯಿಂದ ಉಭಯ ಸಾಹಿತಿಗಳನ್ನೂ ಅಭಿನಂದಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top