ಈ ದೇಹವೇ ಶಾಶ್ವತ ಎನ್ನುವಂತೆ ಭಾವಿಸಿಕೊಂಡು ಅತಿಯಾಗಿ ದೇಹದ ವ್ಯಾಮೋಹದ ಹಿಂದೆ ಬಿದ್ದು ಆತ್ಮಜ್ಞಾನಿಗಳಾಗುವುದನ್ನು ಮರೆಯಬಾರದು. ಈ ದೇಹ ಕ್ಷಣಿಕವಾದದ್ದು ದಾಸರು ಇದನ್ನು "ನೀರ ಮೇಲಿನ ಗುಳ್ಳೆ ನಿಜವಲ್ಲೋ ಹರಿಯೇ" ಎಂದು ನಮಗೆ ಮಾರ್ಮಿಕವಾಗಿ ಹೇಳಿದ್ದಾರೆ. ದೇಹವು ಶಾಶ್ವತವಾಗಿ ಇರಲಾರದು ಯಾವ ಕ್ಷಣದಲ್ಲಿ ಬೇಕಾದರೂ ನಾಶ ಹೊಂದಬಹುದು ಅದನ್ನು ನಂಬಿ ಬದುಕುವುದು ವ್ಯರ್ಥವಾದ್ದದ್ದು ಆ ದೇಹದ ಇರುವೆಕೆಯಿಂದ ನಾವುಗಳು ಅಹಂಕಾರಿಗಳಾಗಬಾರದು. ಅಮೆರಿಕ ದೇಶದಲ್ಲಿ ಮಹಮ್ಮದ್ ಅಲಿ ಎನ್ನುವ ಬಾಕ್ಸರ್ ಇದ್ದನು. ಜಗತ್ಪ್ರಸಿದ್ಧ ಬಾಕ್ಸರ್ ಆತ ಅವನ ಎದುರು ಎದುರಾಳಿಗಳೇ ಇರಲಿಲ್ಲ ಸತತವಾಗಿ ವಿಶ್ವ ವಿಜೇತನಾಥ ಅವನು ತನ್ನ ಯೌವನ ಶಾಶ್ವತ ಯನ್ನುವಂತೆ ಯಾವತ್ತಿಗೂ ದೇಹದ ಶಕ್ತಿ ಕುಗ್ಗಲಾರದು ಎಂದು ಭಾವಿಸಿಕೊಂಡು ಜಗತ್ತಿನ ಜನರಿಗೆ ಒಂದು ಸವಾಲನ್ನು ಎಸೆದ ಯಾರಾದರೂ ಜಗತ್ತಿನಲ್ಲಿ ಪುರುಷರೆನ್ನುವವರು ಇದ್ದರೆ ತನ್ಯದುರು ನಿಲ್ಲಲಿ ಎಂದು ಗರ್ವದಿಂದ ಬಿಗಿದ, ಆದರೆ ಮುಂದೊಂದು ದಿನ ಯಾವ ದೇಹವನ್ನ ನಂಬಿಕೊಂಡು ಅಹಂಕಾರದ ಮಾತುಗಳನ್ನಾಡಿದ್ದನೋ ಅದೇ ದೇಹವು ಅವನನ್ನು ನರಕಯಾತನೆಗೆ ದೂಡಿತು. ತನ್ನ 50ನೇ ವಯಸ್ಸಿನಲ್ಲಿ ಕಾರ್ಯಕ್ರಮಗಳಿಗೆ ಬರಬೇಕಾದರೆ ಗಾಲಿ ಕುರ್ಚಿಯನ್ನು ಬಳಸಿಕೊಂಡು ಮೂರ್ನಾಲ್ಕು ಜನರು ಸಹಾಯಕರನ್ನು ಇಟ್ಟುಕೊಳ್ಳುವ ಹಾಗಾಯಿತು. ಅದಕ್ಕಾಗಿ ಈ ದೇಹವನ್ನು ನಂಬಿ ಕೆಡಬೇಡ ಎಂದರು ಶಿವಶರಣರು.
ಅಮೇದ್ಯದ ಮಡಿಕೆ, ಮೂತ್ರದ ಕುಡಿಕೆ,
ಎಲುವಿನ ತಡಿಕೆ, ಕಿವಿನ ಹಡಿಕೆ,
ಸುಡಲಿ ದೇಹವ: ಒಡಲುವಿಡಿದು ಕೆಡದಿರು,
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ
ಅಕ್ಕಮಹಾದೇವಿಯು ತನ್ನ ವಚನದಲ್ಲಿ ದೇಹವು ಎಲ್ಲುವಿನ ಹಂದರ ಇದು ಮಲಮೂತ್ರದಿಂದ ಕೂಡಿದ ಮಡಿಕೆ ಕೊಳಕಾದದ್ದೆ ಇದರೊಳಗೆ ತುಂಬಿಕೊಂಡಿದೆ. ಅದರಿಂದ ದೇಹದ ಮೋಹವನ್ನ ಬಿಟ್ಟು ಚೆನ್ನಮಲ್ಲಿಕಾರ್ಜುನನನ್ನು ಅರಿತುಕೊಳ್ಳಲು ಕಾತುರನಾಗಿ ಧ್ಯಾನಿಸು ಎಂದು ಅಕ್ಕನು ನುಡಿದಳು. ನಿಜಗುಣ ಶಿವಯೋಗಿಗಳು ಇದಕ್ಕೆ 'ಘಟವೇ ಪುಸಿ ಘಟವೇ ನೀನು ದಿಟದಂತೆ ತೋರಿ ಮೋಹಿಪುದೇನೆಂಬೆ 'ಇಲ್ಲಿ ದೇಹವನ್ನು ಮಣ್ಣಿನ ಮಡಿಕೆಗೆ ಹೋಲಿಸಿ ನೀನು ಕ್ಷಣಿಕ ಹೊತ್ತು ತೋರಿ ಮಾಯವಾಗುವೆ ನಿನ್ನ ಇರುವಿಕೆ ಪುಸಿಯಾದದ್ದು ಎನ್ನುತ್ತಾರೆ. ಅದಕ್ಕಾಗಿ ನಾವುಗಳು ಈ ದೇಹವನ್ನು ಮೋಹಕ್ಕಾಗಿ ಬಳಸಿಕೊಳ್ಳದೆ ಸ್ವಾರ್ಥಕ್ಕಾಗಿ ಬದುಕದೆ ಇದನ್ನು ಪ್ರಸಾದ ಕಾಯವಾಗಿ ಮಾಡಬೇಕಿದೆ. ಅನೇಕ ಯೋಗಿ ಋಷಿವರ್ಯರು ಇದೇ ದೇಹವನ್ನು ಬಳಸಿಕೊಂಡೆ ಭಗವಂತನ ಸನ್ನಿಧಾನ ಸೇರಿದರು. ಇನ್ನೂ ಕೆಲವರು ಜಗತ್ತಿನ ಮಹಾ ಸಾಧಕರಾಗಿ ಬೆಳಗಿದರು. ಕಾಳಿದಾಸನು ಒಂದು ಕಡೆ ಹೇಳುತ್ತಾನೆ, "ಶರೀರ ಮಾಧ್ಯಂ ಖಲುಧರ್ಮ ಸಾಧನಂ" ಅಂದರೆ ಈ ಶರೀರವು ಧರ್ಮದ ಮಾರ್ಗದಲ್ಲಿ ನಡೆಯಲು ಇರುವ ಒಂದು ಸಾಧನದಂತಿದೆ. ಇದನ್ನು ಸರಿಯಾಗಿ ಬಳಸಿಕೊಂಡುಬಿಟ್ಟರೆ ಅಸಾಧ್ಯವನ್ನು ಸಾಧ್ಯವಾಗಿಸಬಲ್ಲೆವು.
-ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ ವಿಜಯಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ