ಇಂದು ದಿವಶಿ, ಅಥವಾ ನಾಗರ ಅಮಾವಾಸ್ಯೆ ಇದೆ. ಉತ್ತರ ಕರ್ನಾಟಕದಲ್ಲಿ ಇದನ್ನು ನಾಗರ ಅಮಾವಾಸ್ಯ ಅಂತ ಕರೆಯುತ್ತಾರೆ. ದಿವಶಿ ಗೌರಿ ಪೂಜೆ ಅಂತ ಕರೆಯುತ್ತಾರೆ.
ಎರಡು ಶಿವ ಪಾರ್ವತಿ ಅಂತ ಅನ್ಕೊಂಡು ಎರಡು ತ್ರಿಕೋನ ಆಕಾರದಲ್ಲಿ (ಕೊಂತಿ) ಮಾಡಿ, ಮತ್ತೆ ಗಣಪ, ಸ್ಕಂದ ಅಂತ ಚಿಕ್ಕ ಮಣ್ಣಿನ ಬೊಂಬೆ ಮಾಡಿ ಇಟ್ಟು ಪೂಜಿಸಬೇಕು.
ಒಂದು ಖಣವನ್ನು ಮಣೆ ಮೇಲೆ ಹರಡಿ ಕೊಬ್ರಿ ಬಟ್ಟಲು ತಗೊಂಡು ಅದ್ರಲ್ಲಿ ಕನ್ಯೆ ಪೂಜೆ ಮಾಡಿದ್ರೆ 5, ಸುಮಂಗಲಿ ಹೊಸದಾಗಿ ಮದುವೆ ಆದವರು 9 ಅಡಿಕೆ ಬೆಟ್ಟ ಇಟ್ಟು, ಅದ್ರ ಹಿಂದೆ ಶಿವ ಪಾರ್ವತಿ, ಮಕ್ಕಳ ಬೊಂಬೆ ಮಾಡಿ ಇಟ್ಟು ಅರಿಶಿನ ಕುಂಕುಮ, ಗೆಜ್ಜೆ ವಸ್ತ್ರ, ಹೂವು, ಮತ್ತು ಕರಿಕೆ ಪತ್ರಿ ಏರಿಸಿ ಪೂಜೆ ಮಾಡಬೇಕು. ಇಲ್ಲಿ ಕನ್ಯೆ ಇದ್ರೆ 5 ಎಳೆ ದಾರ, ಹೊಸದಾಗಿ ಮದುವೆಯಾದವರು 9 ಎಳೆ ದಾರ ಹಾಕಿ ಹಾಲಿನಲ್ಲಿ ನೆನೆಸಿ ಅರಿಶಿನ ಕುಂಕುಮ ಹಚ್ಚಿ ಗೌರಿಗೆ ಏರಿಸಬೇಕು. ಸಂಜೆ 5 ಎಳೆ ಧಾರಕ್ಕೆ 5 ಗಂಟು, 9 ಎಳೆ ದಾರಕ್ಕೆ 9 ಗಂಟುಗಳನ್ನು ಹಾಕಬೇಕು. ಗಂಟುಗಳನ್ನು ಹಾಕುವಾಗ ಅದ್ರಲ್ಲಿ ಅರಿಶಿನ, ಕುಂಕುಮ, ಗೌರಿಗೆ ಏರಿಸಿದ, ಗೆಜ್ಜೆ ವಸ್ತ್ರದ ತುಣುಕು, ಕರಿಕೆ, ಪತ್ರಿ, ಹಾಕಿ ಕಟ್ಟಬೇಕು. ಸಂಜೆ ಕೊರಳಲ್ಲಿ ಧರಿಸಬೇಕು. ಪಂಚಮಿ ದಿನ, ನಾಗಪ್ಪನಿಗೆ ಈ ಧಾರಗಳನ್ನು ಅರ್ಪಿಸಬೇಕು.
ಎಡಬಲಕ್ಕೆ ದೀಪ ಸ್ಥoಭ ಇಟ್ಟು ಅದಕ್ಕೆ ಗೆಜ್ಜೆ ವಸ್ತ್ರ ಮತ್ತು ನೆನೆದ ಕಡಲೆಕಾಳುಗಳನ್ನು ಉಡಿ ತುಂಬಿ ಪೂಜೆ ಮಾಡಬೇಕು.
ಆಮೇಲೆ ಸಮೇಗೂ ಅರಿಶಿನ ಕುಂಕುಮ, ಹೂವು, ಕರಿಕೆ ಪತ್ರಿ ಏರಿಸಿ, ನೆನೆದ ಕಡಲೆ ಉಡಿ ತುಂಬಬೇಕು. ಹೂರಣದ ಕುಚ್ಚಿದ ಕಡಬು ನೈವೇದ್ಯ ಉತ್ತರ ಕರ್ನಾಟಕ ದಲ್ಲಿ ಇದನ್ನು ನಾಗರ ಅಮಾವಾಸ್ಯ ಅಂತೀವಿ, ದಿವಶಿ ಗೌರಿ ಪೂಜೆ ಅಂತೀವಿ, ಕರಿ ಗಡಬು ಮಾಡೋದಿಲ್ಲ, ಕುಚ್ಚಿದ ಕಡಬು ಮಾಡ್ತೀವಿ. ಎಡಬಲಕ್ಕೆ ದೀಪ ಸ್ಥಂಭ ಇಟ್ಟು ಅದಕ್ಕೆ ಗೆಜ್ಜೆ ವಸ್ತ್ರ ಮತ್ತು ನೆನೆದ ಕಡಲೆಕಾಳುಗಳನ್ನು ಉಡಿ ತುಂಬಿ ಪೂಜೆ ಮಾಡ್ತೀವಿ, ಎರಡು ಶಿವ ಪಾರ್ವತಿ ಅಂತ ಅನ್ಕೊಂಡು ಎರಡು ಕೊಂತಿ ಮಾಡಿ, ತ್ರಿಕೋನ ಆಕಾರ ದಲ್ಲಿ ಮಾಡಿ ಪೂಜೆ ಮಾಡ್ತೇವೆ. ಮತ್ತೆ ಗಣಪ ಸ್ಕಂದ ಅಂತ ಚಿಕ್ಕ ಮಣ್ಣಿನ ಬೊಂಬೆ ಮಾಡಿ ಇಟ್ಟು ಪೂಜಿಸಬೇಕು. ಎಲ್ಲ ಮುಗಿದ ಬಳಿಕ, ಹೊಸ್ತಿಲು ಪೂಜೆ ಮಾಡಿ ಅದಕ್ಕೂ ಕರಿಕೆ ಪತ್ರಿ ಏರಿಸಿ ದೀಪ ಹಚ್ಚಿಟ್ಟು, ಮೋದಕದಂತೆ ಮಾಡಿದ ಭಂಡಾರವನ್ನು ಅಣ್ಣ ತಮ್ಮಂದಿರು ಒಡೆಯಬೇಕು. ಭಂಡಾರ ದಲ್ಲಿ ನಾಣ್ಯ ಹಾಕಿರಬೇಕು.
ಶಿವ ಪಾರ್ವತಿಯರನ್ನು ಪೂಜಿಸಿ, ಸೌಭಾಗ್ಯ ಮತ್ತು ಎಲ್ಲ ಸಂಸಾರದ ಸೌಖ್ಯಕ್ಕಾಗಿ ಬೇಡಿ ಆಶೀರ್ವಾದ ಪಡೆಯಬೇಕು.
-ರೇಖಾ ಮುತಾಲಿಕ್, ಬಾಗಲಕೋಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ