ದಾವಣಗೆರೆ: ಖುಷಿ ವೆಲ್‌ಫೇರ್ ತಂಡದಿಂದ ದಾವಣಗೆರೆಯ ಎಸ್‌ಓಜಿ ಕಾಲೋನಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಈ ಸ್ಪರ್ಧೆಯಲ್ಲಿ ಒಂದರಿಂದ ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೂ ತರಗತಿವಾರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೇ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.
ಸುಮಾರು 35 ಕ್ಕೂ ಹೆಚ್ಚಿನ ಪುಸ್ತಕಗಳು, 60 ಕ್ಕೂ ಹೆಚ್ಚಿನ ಪೆನ್ಸಿಲ್‌ಗಳು ಹಾಗೂ 250 ಕ್ಕೂ ಹೆಚ್ಚಿನ ಪೆನ್ನುಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಹಣ ಸಹಾಯ ಮಾಡಿದ ಆಶಾ.ಬಿ, ಕಾಂತರಾಜ್.ಟಿ, ವಿತರಣೆಗೆ ಸಹಕರಿಸಿದ ಡಿ.ಕೆ.ಪವನ್, ರಘುವೀರ್ ದಳವಾಯಿ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ಅವಕಾಶ ಕಲ್ಪಿಸಿಕೊಟ್ಟ ಶಾಲೆಯ ಮುಖ್ಯೋಪಾಧ್ಯಾಯರಾದ ರೇಣುಕಮ್ಮ ಎಂ ಮತ್ತು ಸತ್ಯವತಿ, ರಸಪ್ರಶ್ನೆ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದ ಶಾಲೆಯ ಶಿಕ್ಷಕರಾದ ಶಂಕರಪ್ಪ.ಜಿ.ಟಿ, ಸುಶೀಲಮ್ಮ ಕೆ.ಎಂ, ಚಂದ್ರಕಲಾ ಎಂ.ಆರ್, ಲೀಲಾವತಿ.ಎಂ.ಆರ್, ಪಲ್ಲವಿ.ಜಿ.ಎಸ್, ಬಾಬುಜಾನ್.ಕೆ.ಎಂ, ನಾಜಿಮಾ ಐ.ಬಿ, ಆಶಾರಾಣಿ. ಎಲ್.ಎಸ್, ಪ್ರಭಾವತಿ ಬಿ.ಜಿ, ಹಾಗೂ ಕಾರ್ಯಕ್ರಮಕ್ಕೆ ಸಲಹೆಗಳನ್ನು ನೀಡಿದ ರೇವಣ್ಣ ಸಿದ್ದಪ್ಪರವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರಾದ ಹಾಗೂ ಖುಷಿ ವೆಲ್‌ಫೇರ್ ತಂಡದ ನಿರ್ವಾಹಕ ಪ್ರಜ್ವಲ್.ಕೆ.ಎನ್ ಅಭಿನಂದನೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ