ಸ್ವಾತಂತ್ರ್ಯೋತ್ಸವ ಆತ್ಮಾವಲೋಕನದ ದಿನವಾಗಲಿ

Upayuktha
0

ಮೈಲಸಂದ್ರದ ಎಂಎನ್ಆರ್ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನೋತ್ಸವದ ಅದ್ದೂರಿ ಆಚರಣೆ: ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ



ಬೆಂಗಳೂರು: ಬೆಂಗಳೂರು ಹೊರ ವಲಯದ ಬೇಗೂರು ಸಮೀಪ ಮೈಲಸಂದ್ರದ ಎಂ ಎನ್ ಆರ್ ವರ್ಲ್ಡ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. 


ಮುಖ್ಯ ಅತಿಥಿಯಾಗಿ  ಧ್ವಜಾರೋಹಣ ಮಾಡಿ ಮಾತನಾಡಿದ ಅಮರ ಬಾಪು ಚಿಂತನ ದ್ವೈಮಾಸಿಕ ಪತ್ರಿಕೆಯ ಉಪಸಂಪಾದಕ ಮತ್ತು ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರು ಪರಕೀಯರ ಆಡಳಿತದಿಂದ ದೂರಾಗಿ ಸ್ವತಂತ್ರ ಭಾರತದ ಪ್ರಜೆಗಳಾಗಿ 77 ಸಂವತ್ಸರಗಳನ್ನು ಪೂರೈಸಿದ್ದೇವೆ ಎಂದರು.


ಸ್ವಾತಂತ್ರ್ಯ  ನಂತರದ  ರಾಷ್ಟ್ರ ನಿರ್ಮಾಪಕರು ತಮಗೆ ದೊರಕಿರುವ ಸ್ವಾತಂತ್ರ್ಯವನ್ನು ನವ ಸಮಾಜ ನಿರ್ಮಾಣದ ಅಭ್ಯುದಯಕ್ಕೆ ಮೀಸಲಾಗಿಡುವ ಕನಸು ಕಂಡರು, ಆದರೆ ನಮ್ಮ ಇತ್ತೀಚಿಗಿನ ರಾಜಕೀಯ ನಾಯಕರು ದೇಶಕ್ಕೆ ದೊರಕಿರುವ ಸ್ವಾತಂತ್ರ್ಯವನ್ನು ತಮಗೆ ದೊರೆತ ರಾಜಕೀಯ ಸ್ವಾತಂತ್ರ್ಯ ಎಂದುಕೊಂಡು ಬೀಗುತ್ತಿದ್ದಾರೆ. ಸಂಘಟಿತ ಹೋರಾಟದ ಫಲದಿಂದ ಸ್ವಾತಂತ್ರ್ಯ ಗಳಿಸಿದ್ದು, ಮನುಷ್ಯ ಸಂಘಟನಾಗುವುದರಲ್ಲಿಯೇ ಸಾಧನೆ ಅಡಗಿಡೆ ಇದೇ ಭಾರತೀಯ ಸಂಸ್ಕೃತಿಯ ತಿರುಳು ಎಂದು ಅವರು ನುಡಿದರು.


ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರವಲ್ಲ, ಜವಾಬ್ದಾರಿಯುತ ಸ್ವಾತಂತ್ರ್ಯ ನಮ್ಮೆಲ್ಲರ ದೀಕ್ಷೆಯಾಗಬೇಕು. ಸ್ವಾತಂತ್ರ್ಯದ ಫಲ ಸಕಲರಿಗೂ ಸಮನಾಗಿ ಮುಟ್ಟಬೇಕು. ಆ ನಿಟ್ಟಿನಲ್ಲಿ ಸ್ವಾತಂತ್ರೋತ್ಸವ ಪ್ರತಿದಿನವೂ ಪ್ರತಿ ಮನೆಯ, ಪ್ರತಿ ಮನದ ಆತ್ಮಾವಲೋಕನದ ದಿನವಾಗಬೇಕು ಎಂದು ಅಭಿಪ್ರಾಯ ಪಟ್ಟರು .


ಎಂ ಎನ್ ಆರ್ ಮತ್ತು ಎನ್ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಂಸ್ಥಾಪಕ ಅಧ್ಯಕ್ಷ ಎನ್ ನಂಜ ರೆಡ್ಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ವರೆಗೆ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ ನಡೆಯಿತು. ಎಂ ಎನ್ ಆರ್ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಎಂ ಎನ್ ಆರ್ ವರ್ಲ್ಡ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಆರ್ ಮೋಹನ್ ಕುಮಾರ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top