ಕೋಣನಕುಂಟೆ ರಾಯರ ಮಠದಲ್ಲಿ ಆರಾಧನಾ ಮಹೋತ್ಸವ ಆ.19ರಿಂದ 22ರ ವರೆಗೆ

Upayuktha
0


ಬೆಂಗಳೂರು:  ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವವನ್ನು ನಾಡಿನಾದ್ಯಂತ, ಶ್ರೀಕ್ರೋಧಿನಾಮ ಸಂವತ್ಸರದ ಶ್ರಾವಣ ಮಾಸದ ಕೃಷ್ಣ ಪಕ್ಷದ ಪ್ರತಿಪದ ದಿನಾಂಕ ಆ.20ರ ಮಂಗಳವಾರದಿಂದ  ಆ. 22.ರ ವರೆಗೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.


ಕೋಣನಕುಂಟೆಯ ರಾಯರ ಮಠದಲ್ಲಿ ಆರಾಧನೆಯ ದಿನಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ, ಜ್ಞಾನಯಜ್ಞ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಆ.19 ರ ಸಂಜೆ 5.00 ಗಂಟೆಗೆ ಉಡುಪಿಯ ನರಸಿಂಹ ಪೀಠದ ಕಾಣಿಯೂರು ಮಠದ  ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಆರಾಧನಾ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಚಾಲನೆಗೊಳ್ಳಲಿವೆ. 


19 ರಂದು ಸಂಜೆ ಗೋಪೂಜೆ, ಧಾನ್ಯಪೂಜೆ, ಮಂಟಪಪೂಜೆ, ಧ್ವಜಾರೋಹಣ ಕಾರ್ಯಕ್ರಮಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ. ಪರಮ ಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಕೋಣನಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಶೇಷ ವಸ್ತ್ರ ಸಮರ್ಪಣೆ ಮಾಡುವ ಮೂಲಕ 353ನೇ ಆರಾಧನಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

    

ಆರಾಧನೆಯ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಮೃತ್ತಿಕಾ ಬೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ವಿಶೇಷ ಫಲ ಪಂಚಾಮೃತ ಅಭಿಷೇಕ, ನಿತ್ಯ ನೂತನ ವಿಶೇಷ ಅಲಂಕಾರಗಳು, ಉತ್ಸವ ರಾಯರಿಗೆ ಕನಕಮಹಾಪೂಜೆ, ಪಾದಪೂಜೆ ಹಾಗೂ ಪ್ರತಿನಿತ್ಯ ಚತುರ್ವೇದ ಪಾರಾಯಣ , ಶಾಸ್ತ್ರಾನುವಾದ, ವಿವಿಧ ಭಜನಾ ಮಂಡಳಿಗಳಿಂದ ಹರಿನಾಮ ಸಂಕೀರ್ತನೆ, ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಸಂಜೆ ಕಾರ್ಯಕ್ರಮದಲ್ಲಿ ರಾಯರಿಗೆ ದೀವಟಿಗೆಆರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವರಾಯರಿಗೆ ರಜತ ಪಲ್ಲಕ್ಕಿ ಉತ್ಸವ, ರಥೋತ್ಸವ, ಗಜವಾಹನ ಉತ್ಸವ ಹಾಗೂ ರಜತ ರಥೋತ್ಸವ ಸೇವೆಗಳು, ಊಂಜಲು ಸೇವೆಯೊಂದಿಗೆ ಸ್ವಸ್ತಿ ವಾಚನ ಕಾರ್ಯಕ್ರಮವಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 20.8.24 ಮಂಗಳವಾರ ಸಂಜೆ 6.00ಗಂಟೆಗೆ ರಸಾನಂದ ನೃತ್ಯ ಮತ್ತು ಸಂಗೀತ ಶಾಲೆಯ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮೋಹನ್ ರಾವದದ ಅವರ ನೇತೃತ್ವದಲ್ಲಿ ಭರತನಾಟ್ಯ ಹಾಗೂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವಿರುತ್ತದೆ.


ಆ. 21ರ ಸಂಜೆ 6.00 ಗಂಟೆಗೆ ವಸಂತಪುರದ ಶ್ರೀಭವಾನಿಶಂಕರ ದೇವಸ್ಥಾನದ ಅರ್ಚಕರಾದ ಕೀರ್ತಿಶೇಷ ವೇದಬ್ರಹ್ಮ  ಶ್ರೀ ಶಿವಸ್ವಾಮಿಗಳ ಮಕ್ಕಳು ಹಾಗೂ ಮೊಮ್ಮಕ್ಕಳಿಂದ (ವೇದಬ್ರಹ್ಮ ಪ್ರತಿಷ್ಠಾಪನಾ ಚತುರ  ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ)  ವಿಶೇಷ ವಿನೂತನ  ವೇದ ನಾದ ವೈಭವ ಕಾರ್ಯಕ್ರಮ 

ಆ 22ರ  ಗುರುವಾರ ಸಂಜೆ 6.00 ಗಂಟೆಗೆ  ಯುವ ಕಲಾವಿದೆ ಕುಮಾರಿ ಆಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ ಹರಿದಾಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.


ಆ. 21ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಯಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನಕ್ಕೆ ಕ್ಷೇತ್ರ ಸ್ವಾಮಿಯಾದ ಶ್ರೀನಿವಾಸನ ಶೇಷವಸ್ತ್ರ ಸಮರ್ಪಣೆ, ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಉತ್ಸವ ರಾಯರಿಗೆ ಮೆರವಣಿಗೆ ಮೂಲಕ ಕ್ಷೇತ್ರ ಸ್ವಾಮಿ ಶ್ರೀನಿಧಿ ಶ್ರೀನಿವಾಸ ದೇವರ ಹಾಗೂ ಗ್ರಾಮ ದೇವತೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸುವ ಮೂಲಕ ರಾಯರ ಆರಾಧನೆಯನ್ನು ವೈಭವೋಪೇತವಾಗಿ ಆಚರಿಸಲು ತೀರ್ಮಾನಿಸಲಾಗಿದೆ. 


ಕೋಣನಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಶ್ರಾವಣ ಶನಿವಾರ ಪ್ರಸಾದಕ್ಕೆ ಶ್ರೀಮಠದಿಂದ ದವಸ, ಧಾನ್ಯಗಳ ಸಮರ್ಪಣೆ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಸರ್ವ ಸಮರ್ಪಣಾ ಉತ್ಸವವನ್ನು ಮಾಡಲಾಗುವುದು.

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353 ನೇ ಆರಾಧನಾ ಮಹೋತ್ಸವಕ್ಕೆ ಎಲ್ಲಾ ರಾಯರ ಭಕ್ತರು ಕೋಣನಕುಂಟೆ ರಾಯರ ಮಠಕ್ಕೆ ಆಗಮಿಸಿ ಶ್ರೀ ಗುರುಗಳ ಅಂತರ್ಗತ ಶ್ರೀಮನ್ ಮೂಲರಾಮ ದೇವರ ಹಾಗೂ ಕ್ಷೇತ್ರ ಸ್ವಾಮಿ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಅನುಗ್ರಹ ಪಡೆಯಬೇಕೆಂದು ಸೇವಾ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ರಾಯರ ಭಕ್ತರನ್ನು ವಿನಂತಿಸಿಕೊಂಡಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top