ಬಳ್ಳಾರಿ: ಜೆಸ್ಕಾಂ ಬಳ್ಳಾರಿ ನಗರ ಉಪವಿಭಾಗ-1 ರ ವ್ಯಾಪ್ತಿಗೆ ಬರುವ ವಿದ್ಯುತ್ ಗ್ರಾಹಕರು ಜನವರಿ-2023 ರಿಂದ ಡಿಸೆಂಬರ್-23 ವರೆಗೆ ಬಳಸಲಾದ ಒಟ್ಟು ವಿದ್ಯುತ್ ಬಿಲ್ಲಿನ ಸರಾಸರಿ ಮೊತ್ತದ ಎರಡು ಪಟ್ಟು ಮೊತ್ತವನ್ನು ಖಾತೆಯಲ್ಲಿ ಠೇವಣಿ ರೂಪದಲ್ಲಿ ಇರಬೇಕು ಎಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಇ.ಟಿ. ಲಕ್ಷ್ಮೀ ಅವರು ಅವರು ತಿಳಿಸಿದ್ದಾರೆ.
ವಿದ್ಯುತ್ ಗ್ರಾಹಕರು ತಮ್ಮ ಖಾತೆಯಲ್ಲಿ ಈಗಾಗಲೇ ಇರುವಂತಹ ಠೇವಣಿ, ಈ ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಅದನ್ನು ನಿಗಮವು ಅಧಿಕ ಭದ್ರತಾ ಠೇವಣಿ(ಎಎಸ್‌ಡಿ) ರೂಪದಲ್ಲಿ ವಸೂಲಿ ಮಾಡುವ ಹಕ್ಕು ಹೊಂದಿರುತ್ತದೆ. ತಮ್ಮ ವಿದ್ಯುತ್ ಬಿಲ್ಲಿನ ಕೆಳ ಭಾಗದಲ್ಲಿ ಎಎಸ್‌ಡಿ ಎಂದು ನಮೂದಾಗಿರುವ ಮೊತ್ತವನ್ನು ಆ.31 ರೊಳಗೆ ಪಾವತಿಸಬೇಕು. ಮೊತ್ತವನ್ನು ಜೆಸ್ಕಾಂ ಕಚೇರಿ ಅಥವಾ ಆನ್‌ಲೈನ್ ಮೂಲಕ ಪಾವತಿಸಬಹುದು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ