ಆ.11: ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ

Upayuktha
0

ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಗೋಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅರೋಗ್ಯ ಭಾರತಿ, ಪುತ್ತೂರು ಜಿಲ್ಲೆ ಇವರ ಸಹಯೋಗದಲ್ಲಿ "Answer for cancer " ಖ್ಯಾತಿಯ ಬೆಂಗಳೂರಿನ ಆಯುರ್ವೇದ ತಜ್ಞ ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞ ಡಾ. ಡಿ.ಪಿ. ರಮೇಶ್ ಇವರಿಂದ ಆ.11ರಂದು ಪಂಚಗವ್ಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.


ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಗಂಟೆಗೆ ಮಂಗಳೂರು ವಿಭಾಗದ ಗೋಸೇವಾ ಗತಿವಿಧಿಯ ಸಂಯೋಜಕ ಗಂಗಾಧರ ಪೆರ್ಮಂಕಿ ಉದ್ಘಾಟಿಸಲಿದ್ದಾರೆ. ಪುತ್ತೂರಿನ ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆವಹಿಸಲಿದ್ದಾರೆ.


ಮೊದಲ ಗೋಷ್ಠಿಯಲ್ಲಿ ಡಾ. ಡಿ.ಪಿ. ರಮೇಶ್ ಇವರು "ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ"ದ ಬಗ್ಗೆ, ಎರಡನೆಯ ಗೋಷ್ಠಿಯಲ್ಲಿ ಬೆಂಗಳೂರಿನ ಸೈಕೋನ್ಯೂರೋ ಇಮ್ಮ್ಯೂನೊಲೊಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞ ಡಾ. ಅವಿನಾಶ್ ಸಲ್ಗರ್ ಅವರು "ಪಂಚಗವ್ಯ ಚಿಕಿತ್ಸೆ- ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ, ಮೂರನೆಯ ವಿಚಾರಗೋಷ್ಠಿಯಲ್ಲಿ ಮಧ್ಯಾಹ್ನದ ನಂತರ ಡಾ. ಅವಿನಾಶ್ ಸಲ್ಗರ್  ಇವರು "ಮನೋದೈಹಿಕ ಕಾಯಿಲೆಗಳು & ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯ"ದ ಬಗ್ಗೆ ವಿಚಾರಗಳನ್ನು ತಿಳಿಸಲಿದ್ದಾರೆ.


ವಿಚಾರಗೋಷ್ಠಿಗೆ ಹಾಗೂ ತಪಾಸಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಯಾವುದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಈಗ ಗುಣ ಹೊಂದಿದವರು ಅದು ಮರುಕಳಿಸದಂತೆ, ಕ್ಯಾನ್ಸರ್ ಎಂದು ಈಗ ತಾನೇ ಪತ್ತೆಯಾದ ಹಂತದಲ್ಲಿ ಇರುವವರು, ಚಿಕಿತ್ಸೆ ಪಡೆಯುತ್ತಾ ಇರುವವರು ಸಂದರ್ಶಿಸಿ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಗೆ ಬರುವವರು ಹಳೆಯ ಎಲ್ಲಾ ರಿಪೋರ್ಟ್ಗಳನ್ನು ತರಬೇಕು. ಹೆಚ್ಚಿನ ಮಾಹಿತಿಗೆ ವಾಟ್ಸಪ್ ಸಂಖ್ಯೆ 90192 73522, ಹರ್ಷಿತ್ ಬೆಟ್ಟಂಪಾಡಿ (90199 34581), ಗಣೇಶ್ ಮುವ್ವಾರು (94490 09499 ), ಜಯಾನಂದ ಕೆ (94484 45828) ಇವರುಗಳನ್ನು ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ, ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ವಿನಂತಿಸಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top