ಪುತ್ತೂರು:ಅಂಬಿಕಾ ವಿದ್ಯಾಲಯ: ಎನ್‌ಡಿಎ ತರಗತಿಗಳಿಗೆ ಚಾಲನೆ

Upayuktha
0


ಪುತ್ತೂರು:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಪರೀಕ್ಷೆಯು ಸೈನ್ಯ ಸೇರುವವರಿಗೆ ಒಳ್ಳೆಯ ಅವಕಾಶ. ಇದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು. ಸೈನ್ಯದಲ್ಲಿ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಸಮಾನ ಅವಕಾಶವಿದೆ. ಆದರೆ ಪ್ರಸ್ತುತ ನಮ್ಮ ಪ್ರದೇಶಗಳಿಂದ ಯುವಸಮೂಹ ದೊಡ್ಡ ಉತ್ಸಾಹ ತೋರದಿರುವುದು ಹಾಗೂ ಉತ್ತಮ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರದಿರುವುದು ವಿಷಾದಕರ ಎಂದು ರಾಷ್ಟ್ರೀಯ ಸೈನಿಕ ಸಂಸ್ಥೆಯ ರಾಜ್ಯ ಯುವ ಅಧ್ಯಕ್ಷ ಅರವಿಂದ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್  ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಎನ್‌ಡಿಎ ತರಗತಿಗಳನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶದಲ್ಲಿ ಎಂತಹದ್ದೇ ಕಷ್ಟ ಬಂದರೂ ಒದಗಿಬರುವವರು ಸೈನಿಕರು. ಆದರೆ ಕಷ್ಟದ ಸಮಯದಲ್ಲಿ ಮಾತ್ರ ಸೈನಿಕರನ್ನು ನೆನೆಸಿಕೊಳ್ಳುವ ಸ್ವಾರ್ಥಿ ಜನರಿದ್ದಾರೆ. ಇದು ನಮ್ಮ ದುರ್ದೈವ. ಸೈನ್ಯದ ಶಿಕ್ಷಣ ನೀಡುವಲ್ಲಿ ಇಸ್ರೇಲ್  ಮುಂಚೂಣಿಯಲ್ಲಿದೆ, ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿಯೂ ಕಾನೂನು ಜಾರಿಗೆ ಬರಬೇಕು. ಪ್ರತಿಯೊಬ್ಬರೂ ದೇಶಭಕ್ತಿಯ ಪಂಜುಗಳಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು ಮತ್ತು ಎನ್‌ಡಿಎ ತರಬೇತುದಾರೆ ಮಲ್ಲಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರೀವತ್ಸ.ಪಿ ಪ್ರಸ್ತುತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top