78 ನೇ ಸ್ವಾತಂತ್ಯ ದಿನಾಚರಣೆಯ ವಿಶೇಷ ಅತಿಥಿಯಾಗಿ ಬಳ್ಳಾರಿಯ ವಿದ್ಯಾರ್ಥಿನಿ ಕು. ಕಂದಿಬೆಡಲ ಸಾಹಿತಿ

Upayuktha
0

ಬಳ್ಳಾರಿ: ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಎನ್.ಎಸ್.ಎಸ್ ಘಟಕಗಳಿಂದ ಕು. ಕಂದಿಬೆಡಲ ಸಾಹಿತಿ ಬಿ.ಎಸ್ಸಿ 6ನೇ ಸೆಮಿಸ್ಟರ್ ವಿದ್ಯಾರ್ಥಿನಿ ಇವರು 15-08-2024 ರಂದು ದೆಹಲಿಯಲ್ಲಿ ನಡೆಯುವ 78 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಯವರ ವಿಶೇಷ ಅತಿಥಿಯಾಗಿ ಭಾಗವಹಿಸುವರು. 


ಈ ಸಂಗತಿ ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ  ಜಾನೇಕುಂಟೆ ಬಸವರಾಜ, ಕಾರ್ಯದರ್ಶಿ  ಡಾ. ಅರವಿಂದ ಪಾಟೀಲ್, ಸಹಕಾರ್ಯದರ್ಶಿ  ಯಾಳ್ಪಿ ಮೇಟಿಪಂಪನಗೌಡ, ಕೋಶಾಧಿಕಾರಿ ಬೈಲುವದ್ಧಿಗೇರಿ ರ‍್ರಿಸ್ವಾಮಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ, ಮಹಾವಿದ್ಯಾಲಯದ ಪ್ರಾಂಶುಪಾಲೆ  ಶ್ರೀಮತಿ ಹೆಚ್.ರತ್ನ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು. 


ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ  ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯರವರು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಈ ವಿಷಯ ಪ್ರೇರಣೆಯಾಗಿದೆ ಇದೇ ರೀತಿ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಚಟುವಟಿಕೆಗಳಲ್ಲಿ ಭಾಗವಹಿಸಿ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top