ಪುತ್ತೂರು: 78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುತ್ತೂರು ತಾಲೂಕು ಪಂಚಾಯತ್ ವತಿಯಿಂದ ಸ್ವಾತಂತ್ರ್ಯದ ಸಂಭ್ರಮವನ್ನುಹಾಗೂ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಿಗೊಳಿಸಲು ಹಾಗೂ ಮುಂದುವರೆಸಲು ಉತ್ತೇಜನ ನೀಡುವ ಸಲುವಾಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ತಾಲೂಕಿನ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಂಬಿಸುವ ಸಲುವಾಗಿ ರಂಗೋಲಿ ಸ್ಪರ್ಧೆಯನ್ನು ಆ.14 ರಂದು ತಾಲೂಕು ಪಂಚಾಯತ್ ಒಳಾಂಗಣದಲ್ಲಿ ಆಯೋಜಿಸಿದರು.
ಈ ರಂಗೋಲಿ ಸ್ಪರ್ಧೆಯಲ್ಲಿ 9 ತಂಡಗಳು ಭಾಗವಹಿಸಿದ್ದು, ವಿಶೇಷ ಆಕರ್ಷಣೀಯ ಬಣ್ಣ ಬಣ್ಣಗಳಿಂದ ರಂಗೋಲಿಯನ್ನು ರಚಿಸಿ ಸಂಭ್ರವನ್ನು ಅಭಿವ್ಯಕ್ತಪಡಿಸಿದರು.
ಇದರಲ್ಲಿ ಬಲ್ನಾಡು ಸಮೃದ್ಧಿ ಸಂಜೀವಿನಿ ಒಕ್ಕೂಟದ ಚೇತನಾ ಅವರು ಪ್ರಥಮ ಸ್ಥಾನ, ಬನ್ನೂರು ಶ್ರೀವಿಷ್ಣು ಸಂಜೀವಿನಿ ಒಕ್ಕೂಟದ ರೋಶನಿ ದ್ವಿತೀಯ ಸ್ಥಾನ, ಕೆಯ್ಯೂರು ಶ್ರೀ ದುರ್ಗಾಂಬಿಕಾ ಸಂಜೀವಿನಿ ಒಕ್ಕೂಟದ ಯಶಸ್ವಿ ಅವರು ತೃತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಆ.15 ರಂದು ಕೊಂಬೆಟ್ಟುವಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ವತಿಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ಗಣ್ಯರಿಂದ ಪಡೆದುಕೊಳ್ಳಲಿದ್ದಾರೆ.
ಈ ಸ್ಪರ್ಧೆಯಲ್ಲಿ ನರಿಮೊಗ್ರುವಿನ ಅನುರಾಧ ಹಾಗೂ ಭಾರತಿ, ಕಬಕದ ಯಶೋದ ಹಾಗೂ ಸುಜಾತ, ಬಲ್ನಾಡುವಿನ ಅರುಣ ಹಾಗೂ ಪುತ್ತೂರಿನ ಯಶೋದಾ ಹಾಗೂ ಅಶ್ವಿನಿ ಭಾಗವಹಿಸಿದ್ದರು. ತಾಲೂಕು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಶರ್ಮ ಹಾಗೂ ಕೊಂಬೆಟ್ಟು ಸರಕಾರಿ ಶಾಲೆಯ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ತೀರ್ಪುಗಾರರಾಗಿದ್ದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಜಯಪ್ರಕಾಶ್, ಸಂಜೀವಿನಿ ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ವಲಯ ಮೇಲ್ವಿಚಾರಕಿ ನಮಿತಾ, ತಾಲೂಕು ಸಂಪನ್ಮೂಲ ವ್ಯಕ್ತಿ ಅಂಕಿತ ಸ್ಪರ್ಧೆಯ ಆಯೋಜಕರಾಗಿದ್ದು ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ