ಉಜಿರೆ: ಎನ್.ಎಸ್.ಎಸ್. ಸ್ವಯಂಸೇವಕರಿಂದ ಗದ್ದೆ ನಾಟಿ

Upayuktha
0


ಉಜಿರೆ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ( ಸ್ವಾಯತ್ತ) , ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸ್ವಯಂಸೇವಕರು ಕಕ್ಕರಬೆಟ್ಟು, ಕಿರಿಯಾಡಿಯಲ್ಲಿ ಗದ್ದೆನಾಟಿ ನಡೆಸಿದರು.

ಮಾಲೀಕರಾದ ಡೀಕಯ್ಯ ಪೂಜಾರಿಯವರ ಮಾರ್ಗದರ್ಶನದಲ್ಲಿ 35 ಸ್ವಯಂಸೇವಕರ ತಂಡವು ಒಂದು ಎಕರೆ ಜಾಗದಲ್ಲಿ  ಗದ್ದೆನಾಟಿಯನ್ನು ಯಶಸ್ವಿಯಾಗಿ  ಪೂರ್ಣಗೊಳಿಸಿದರು. 


ಮನೆಯ ಹಿರಿಯರು ಹಲವಾರು ಕೃಷಿಯ ತಂತ್ರಗಳು , ಮತ್ತು ಆಧುನಿಕ ಯುಗದಲ್ಲಿ ಯುವ ಜನತೆಗೆ ಅಗತ್ಯವಾಗಿ ಬೇಕಾಗಿರುವ ಕೃಷಿಯ ಜ್ಞಾನದ ಕುರಿತು ವಿಚಾರವನ್ನು ಹಂಚಿಕೊಂಡರು.


ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪಾ ಆರ್. ಪಿ. , ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿಯ ಸದಸ್ಯರಾದ ಶ್ರೀಮತಿ ಶ್ರುತಿ ,ರಸಾಯನ ಶಾಸ್ತ್ರ ವಿಭಾಗದ ಸಹಾಯಕರಾದ ಶ್ರೀ ಪರಮೇಶ್ವರ್ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top