ಲೇಖಾ ಲೋಕ- 7: ಸೃಜನಶೀಲ ನಿದೇ೯ಶಕ ಎಸ್ ಆರ್ ಪುಟ್ಟಣ್ಣ ಕಣಗಾಲ್

Upayuktha
0




ನ್ನಡ ಚಲನಚಿತ್ರ ಬಿಡುಗಡೆಗೊಂಡಾಗ, ನಿರ್ದೇಶಕನ ಹೆಸರು ನೋಡಿ ಪ್ರೇಕ್ಷಕರು ಚಲನಚಿತ್ರ ವೀಕ್ಷಿಸಲು ಬರುವಂತೆ ಮಾಡಿದ  ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಡಿನ ಅಪರೂಪದ ವ್ಯಕ್ತಿ!

   

ಪ್ರಸಿದ್ಧ ಮತ್ತು ಅದ್ವಿತೀಯ ನಿರ್ದೇಶಕರು, ಛಾಯಾಗ್ರಹಣ ಪರಿಣಿತರು, ಚಿತ್ರ ಕಥೆ, ಸಂಭಾಷಣೆ ಬರೆಯುವ ಅಸಾಮಾನ್ಯ ಮಹನೀಯರು. ಹಲವಾರು ಉತ್ಕೃಷ್ಟ ಚಿತ್ರಗಳನ್ನು ನಿರ್ದೇಶಿಸಿ, ಉದಯೋನ್ಮುಖ ನಟರನ್ನು, ನಟಿಯರನ್ನು, ಪ್ರೋತ್ಸಾಹಿಸಿ, ಕನ್ನಡ ನಾಡಿಗೆ ನೀಡಿದ ಕಣಗಾಲ್ ಪ್ರಖ್ಯಾತರಾದವರು. ವಿಷ್ಣುವರ್ಧನ್, ಅಂಬರೀಷ್, ಆರತಿ, ಧೀರೇಂದ್ರ  ಗೋಪಾಲ್, ಶ್ರೀಧರ್, ಜೈಜಗದೀಶ್, ಗಂಗಾಧರ್, ಪದ್ಮಾವಾಸಂತಿ, ಶಿವರಾಂ ಕಲ್ಪನಾ, ರಾಮಕೃಷ್ಣ, ಅಪರ್ಣಾ, ಮುಂತಾದವರು ಚಲನಚಿತ್ರ ಕ್ಷೇತ್ರದಲ್ಲಿ ಪ್ರಸಿದ್ಧರಾದವರು. ಅನೇಕ ಉತ್ಕೃಷ್ಟ ಕಾದಂಬರಿಗಳನ್ನು ಆಧರಿಸಿ, ಕನ್ನಡ ನಾಡಿನ ಸೃಷ್ಟಿ ಸೌಂದರ್ಯವನ್ನು ಚಲನಚಿತ್ರದಲ್ಲಿ ಸೆರೆ ಹಿಡಿದು ಸೊಗಸಾದ ಸಂಗೀತ ಗೀತೆಗಳನ್ನು ನೀಡಿ ವೀಕ್ಷಕರಿಗೆ ರಸದೌತಣ ನೀಡಿದ ಮಹಾನ್ ನಿರ್ದೇಶಕರು!


ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳನ್ನೂ ನಿದೇ೯ಶಿಸಿ, ಖ್ಯಾತರಾದವರು. ಸಾಕ್ಷಾತ್ಕಾರ, ಬೆಳ್ಳಿಮೋಡ, ಗೆಜ್ಜೆ ಪೂಜೆ, ಶರಪಂಜರ, ಮಾನಸ ಸರೋವರ, ನಾಗರಹಾವು, ರಂಗನಾಯಕಿ, ಎಡಕಲ್ಲು ಗುಡ್ಡದ ಮೇಲೆ, ಅಮೃತಘಳಿಗೆ, ಪಡುವಾರಳ್ಳಿ  ಪಾಂಡವರು, ಕಥಾಸಂಗಮ, ಧಮ೯ಸಿರಿ, ಉಪಾಸನೆ, ಬಿಳಿ ಹೆಂಡತಿ, ಶುಭಮಂಗಳ, ಕಾಲೇಜುರಂಗ, ಕರುಳಿನ ಕರೆ, ಕಪ್ಪು ಬಿಳುಪು, ಮಲ್ಲಮ್ಮನ ಪವಾಡ, ಋಣಮುಕ್ತಳು, ಮಸಣದ ಹೂವು ಮುಂತಾದವು ಪ್ರಸಿದ್ಧ ಚಲನಚಿತ್ರಗಳಾಗಿ ಗಲ್ಲಾಪೆಟ್ಟಿಗೆ ದೋಚಿ ದಾಖಲೆ ಮಾಡಿದವು. ಹಿಂದಿ, ತೆಲುಗು, ತಮಿಳು ಚಿತ್ರಗಳು ಇವರ ನಿರ್ದೇಶನದಲ್ಲೂ ತಯಾರಾದವು.

ಕನ್ನಡ ಕಾದಂಬರಿಗಳ ಸೊಗಸು, ಸಂಭಾಷಣೆ, ಚಿತ್ರಕಥೆ, ಅಧ್ಭುತ ಸಂಗೀತ, ಛಾಯಾಗ್ರಹಣ, ನಟರ ಅದ್ಭುತ ಅಭಿನಯ, ಪ್ರೇಕ್ಷಕರನ್ನು ಸೆರೆ ಹಿಡಿದು, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಪಡೆದು ಅನ್ಯ ಭಾಷಿಕರು ಹುಬ್ಬೇರಿಸುವಂತೆ ಮಾಡಿದ ಅದ್ಭುತ ನಿರ್ದೇಶಕರು. ಕಲಾತ್ಮಕತೆ ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತೆ ನಿರ್ಮಾಣ ಮಾಡಿಸಿ ಮನಮಿಡಿಯುವ, ಮತ್ತೆ ಮತ್ತೆ ವೀಕ್ಷಿಸುವ ಚಿತ್ರಗಳನ್ನು ನಿರ್ದೇಶಿಸಿ, ಕನ್ನಡನಾಡಿಗೆ, ರಾಷ್ಟ್ರಕ್ಕೆ ಕೀರ್ತಿ ತಂದ ಮಹಾನುಭಾವರು. ಚಿತ್ರಬ್ರಹ್ಮ ಎಂದೇ ನಾಡಿನಲ್ಲಿ ಗುರುತಿಸಿಕೊಂಡ ಪುಟ್ಟಣ್ಣ ಕಣಗಾಲ್, ಅನೇಕ ಮಹಿಳಾ ಪ್ರಧಾನ ಸಂದೇಶಯುಕ್ತವಾದ ಚಿತ್ರಗಳನ್ನು ನೀಡಿದರು.

 

ಶುಭ್ರವೇಷ್ಟಿ ರಾಮಸ್ವಾಮಿ ಶರ್ಮ (ಪುಟ್ಟಣ್ಣ ಕಣಗಾಲ್) ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದಲ್ಲಿ ತಾ॥. 1-12-1933ರಂದು ಜನಿಸಿದರು. ಬಡತನದಲ್ಲೇ ಜನಿಸಿದ ಪುಟ್ಟಣ್ಣ ಕಣಗಾಲ್ ಅವರು ಕ್ಲಿನರ್, ಸೇಲ್ಸ್ ಮನ್, ಶಿಕ್ಷಕ, ಚಿತ್ರ  ಪ್ರಚಾರಕರಾಗಿ ದುಡಿದರು. ನಂತರ ಖ್ಯಾತ ನಿರ್ದೇಶಕ ಬಿ.ಆರ್ ಪಂತಲು ಅವರಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದರು.  

ಮೊಟ್ಟ ಮೊದಲು ಮಲಯಾಳಂ ಚಿತ್ರ ಸ್ಕೂಲ್ ಮಾಸ್ಟರ್ ಚಿತ್ರ ನಿರ್ದೇಶಿಸಿ ಸ್ವಂತಂತ್ರ ನಿರ್ದೇಶಕರಾದರು. 1967ರಲ್ಲಿ ಬೆಳ್ಳಿಮೋಡ ಚಲನಚಿತ್ರ ನಿರ್ದೇಶಿಸಿ ಕನ್ನಡದಲ್ಲಿ ಸ್ವತಂತ್ರ ನಿರ್ದೇಶಕರಾದರು. ಸುಮಾರು 24 ಚಲನಚಿತ್ರಗಳನ್ನು ನಿರ್ದೇಶಿಸಿ ಪರಿಣಾಮಕಾರಿಯಾದ ಸದಾ ನೆನಪಿಡುವ ಚಿತ್ರಗಳನ್ನು ನೀಡಿದ್ದಾರೆ. ತಮಿಳಿನ ಖ್ಯಾತ ನಿದೇ೯ಶಕ, ಬಾಲಚಂದರ್ ಇವರನ್ನು ಗುರುಗಳೆಂದು ಪರಿಗಣಿಸಿದ್ದರು. 


ಬಾಲ್ಯದಲ್ಲಿಯೇ ನಾಗಲಕ್ಷ್ಮೀ ಅವರನ್ನು ವಿವಾಹವಾಗಿ ಐದು ಮಕ್ಕಳನ್ನು ಪಡೆದಿದ್ದರು. 1980ರ ಉತ್ತರಾರ್ಧದಲ್ಲಿ ಮಹಾನ್ ನಟಿ ಆರತಿ ಅವರನ್ನು ವಿವಾಹವಾಗಿ ಒಬ್ಬ ಪುತ್ರಿಯನ್ನು ಪಡೆದಿದ್ದಾರೆ. 1985ರಂದು ಮಸಣದ ಹೂವು ಚಲನಚಿತ್ರದ ಚಿತ್ರೀಕರಣದ ಸಂಧಭ೯ದಲ್ಲಿ ವಿಧಿವಶರಾದರು.


ಅನೇಕ ರಾಷ್ಟ್ರೀಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಅತ್ತ್ಯುತ್ತಮ ಚಲನಚಿತ್ರ, ಚಿತ್ರ ಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತಕ್ಕೆ ಪ್ರಶಸ್ತಿಗಳು ಲಭಿಸಿವೆ. ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು.


ಅನೇಕ ಅಧ್ಭುತ ಚಲನಚಿತ್ರಗಳನ್ನು ನೀಡಿ, ಉದಯೋನ್ಮುಖ ನಟರನ್ನು ತಯಾರು ಮಾಡಿ, ನಾಡಿಗೆ ನೀಡಿದ ಮಹನೀಯರು.    ಬೆಂಗಳೂರಿನಲ್ಲಿ ತಮ್ಮ51 ವಯಸ್ಸಿನಲ್ಲಿ ತಾ॥ 5-6-1985 ರಂದು ನಿಧನರಾದರು. ಇವರ ಹೆಸರಿನಲ್ಲೇ ಪ್ರತಿ ವಷ೯ ಇವರ ಸ್ಮರಣಾರ್ಥ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು, ಕನಾ೯ಟಕ ರಾಜ್ಯದ ವಿವಿಧ ವ್ಯಕ್ತಿಗಳಿಗೆ, ಚಲನಚಿತ್ರ ನಿರ್ದೇಶಕರಿಗೆ ನೀಡುತ್ತಲಿದೆ.  


- ಶ್ರೀಧರ. ರಾಯಸಂ, ಗಿರಿನಗರ, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top