ಬಳ್ಳಾರಿ: ಬಳ್ಳಾರಿ ನಗರದಲ್ಲಿ ಹೇಮ ವೇಮ ರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಮತ್ತು ಬಲಿಜ ಭವನದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗು ನಿವೃತ್ತ ರೆಡ್ಡಿ ನೌಕರರ ಸನ್ಮಾನ ಸಮಾರಂಭ ಉದ್ಘಾಟನೆ ಮಾಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡುತ್ತಾ ಬೆಂಗಳೂರಿನಲ್ಲಿ ರೆಡ್ಡಿ ಜನ ಸಂಘದಿಂದ ರೆಡ್ಡಿ ವಿಶ್ವ ವಿದ್ಯಾಲಯ ಆರಂಭಿಸುವ ಉದ್ದೇಶ ಇದೆ ಎಂದು ಹೇಳಿದ್ದಾರೆ.
ರೆಡ್ಡಿ ಜನ ಸಂಘ ಸ್ಥಾಪನೆಗೊಂಡು ನೂರು ವರ್ಷಗಳಾಗುತ್ತಿದೆ. ಈ ವರೆಗೆ ಸಂಘದಲ್ಲಿ ಐಕ್ಯತೆ ಯಿಂದ ಚುನಾವಣೆ ನಡೆದಿಲ್ಲ. ಸಂಘದಿಂದ ವೈದ್ಯಕೀಯ, ದಂತ ವೈದ್ಯಕೀಯ ಬಿಟ್ಟು ಎಲ್ಲಾ ರೀತಿಯ ಶಿಕ್ಷಣ ಬೆಂಗಳೂರಿನಲ್ಲಿ ದೊರೆಯುತ್ತಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚು ನಮ್ಮ ಮತ್ತು ಇತರೇ ಸಮುದಾಯದ ವಿದ್ಯಾರ್ಥಿಗಳೂ ಇಲ್ಲಿ ಕಲಿಯುತ್ತಿದ್ದಾರೆ. ಒಂದು ವಿಶ್ವವಿದ್ಯಾಲಯ ಸ್ಥಾಪಿಸುವ ಚಿಂತನೆ ನಡೆದಿದೆಂದರು. ಸಮಾಜವನ್ನು ಕರ್ನಾಟಕ ಮಟ್ಟದಲ್ಲಿ ಒಂದಡೆ ಸೇರುವ ಕಾರ್ಯ ಆಗಿದೆ. ಈಗ ಭಾರತದಲ್ಲಿನ ರೆಡ್ಡಿ ಸಮುದಾಯವನ್ನು ಒಂದಡೆ ಸೇರಿಸುವ ರಾಷ್ಟ್ರ ಮಟ್ಟದ ರೆಡ್ಡಿ ಸಮಾವೇಶವನ್ನು ಈ ವರ್ಷ ಮಾಡಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾತನಾಡಿ, ನಮ್ಮಲ್ಲಿ ಐಕ್ಯತೆಯ ಕೊರತೆ ಇದೆ. ಅದು ನೀಗಬೇಕು, ಹಲವು ಕಾರಣಗಳಿಂದ ಜನಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಹೆಚ್ಚು ಮಕ್ಕಳನ್ನು ಪಡೆಯಬೇಕು. ಎಲ್ಲರೂ ಸೌಹಾ ರ್ದದಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ನಡೆಯಲಿ. ರಾಮಲಿಂಗಾರೆಡ್ಡಿ ಅವರು ನಮ್ಮ ಸಮುದಾಯದಲ್ಲಿ ಹಿರಿಯರಾಗಿದ್ದು ಅವರಿಗೆ ಮುಖ್ಯ ಮಂತ್ರಿ ಪದವಿ ದೊರೆಯುವಂತಾಗಲಿ ಎಂದರು. ಹರಿಹರ ತಾಲೂಕಿನ ಎರೆ ಹೊಸಹಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠ ರೆಡ್ಡಿ ಗುರು ಪೀಠದ ವೇಮನಾನಂದ ಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿ, ಸಮುದಾಯದ ಜನತೆ ಒಗ್ಗೂಡಿ ಎಲ್ಲರೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಆಶಿಸಿದರು. ಹೇಮ ವೇಮ ರೆಡ್ಡಿ ಜನ ಸಂಘದ ಅಧ್ಯಕ್ಷರೂ ಆಗಿರುವ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ ಸ್.ಜೆ.ವಿ.ಮಹಿಪಾಲ್ ಮಾತನಾಡಿ, ಹೇಮ ವೇಮ ಕೂಡಿದರೆ ಒಂದು ವಿಶೇಷ ಶಕ್ತಿ ಆಗಲಿದೆ. ರಾಮಲಿಂಗಾ ರೆಡ್ಡಿ ಅವರು ಸಿಎಂ ಆಗಬೇಕಿತ್ತು. ಆಗಲಿ ಎಂದರು.
ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘದ ನಿರ್ದೆಶಕ ಎಂ.ಸಿ.ಪ್ರಭಾಕರ ರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮನವಿ, ನಮ್ಮ ಸಮುದಾಯವನ್ನು 2 ಸಿ ಗೆ ಸೇರಿಸಬೇಕು ಎಂದು ಸಚಿವರಲ್ಲಿ ಮನವಿಮಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಶೇಖರ ರೆಡ್ಡಿ ಮಾತನಾಡಿ, ನಮ್ಮ ಸಂಘ ಸ್ಥಾಪನೆಗೊಂಡು ಶತಮಾನವಾಗಲಿದೆ. ಈ ದಿಶೆಯಲ್ಲಿ ನಾವೆಲ್ಲ ಬೃಹತ್ ಸಮಾವೇಶ ಮಾಡಿ ಸಂಘಟಿತರಾ ಗೋಣ ಎಂದರು. ಗಾಲಿ ಲಕ್ಷ್ಮೀ ಅರುಣ ಜನಾರ್ಧನ ರೆಡ್ಡಿ ಮಾತನಾಡಿ, ಧೈರ್ಯ, ಸಾಹ ಸದ ಜೊತೆ ರಾಜಕೀಯದೊಂದಿಗೆ ಜನಸೇವೆ ಮಾಡುವ ಗುಣ ನಮ್ಮರೆಡ್ಡಿ ಸಮುದಾಯದ ಜನತೆಯ ಸ್ವಭಾವ ಅದನ್ನು ನಾವು ಮುಂದುವರೆಸಿ ಕೊಂಡು ಹೋಗುವ ಎಂದ ಅವರು ಗಂಗಾವತಿ ಶಾಸಕರಾದ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಬರಲು ಇರುವ ನ್ಯಾಯಾಲಯದ ಅಡ್ಡಿ ದೂರವಾಗಲೆಂದು ಹೇಳಿ ವೇಮನನ ಪುತ್ಥಳಿ ಯನ್ನು ನಗರದಲ್ಲಿ ಸ್ಥಾಪನೆ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ, ಕಾರ್ನಾಟಕ ರೆಡ್ಡಿ ಜನ ಸಂಘದ ನಿರ್ದೆಶಕ ಗಣ ಪಾಲ ಐನಾಥ ರೆಡ್ಡಿ, ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್ ರೆಡ್ಡಿ, ಬಾಬುರೆಡ್ಡಿ, ಜಿಲ್ಲಾ ಸರ್ಜನ್ ಡಾ.ಬಸಾರೆಡ್ಡಿ, ಕೆ.ಎಂ.ಸಿ ಅಧ್ಯಕ್ಷ ಡಾ.ಯೋಗಾನಂದರೆಡ್ಡಿ ಮೊದಲಾದವರು ಇದ್ದರು. ಎಸ್.ಎಸ್.ಎಲ್.ಸಿ ಹಾಗು ದ್ವಿತೀಯ ಪಿಯುಸಿಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾ ಯದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ರೆಡ್ಡಿ ನೌಕರರನ್ನು ಸನ್ಮಾನಿಸಿ ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ