ರೋಟರಿ ಕ್ಲಬ್ ನಿಂದ ಗಿಡ ನೆಡುವ ಕಾರ್ಯಕ್ರಮ
ಉಜಿರೆ: ಉಜಿರೆಯ ಯಶೋವನ ಆರ್ಬೋರೇಟಮ್ ನ ಕುವೆಂಪು ವನ ಮತ್ತು ಪಂಪವನದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ಪ್ರಕೃತಿ ಈ ನೆಲದ ಸಂಪತ್ತು,ಇದನ್ನು ಸಂರಕ್ಷಿಸುವ ಜೊತೆಗೆ ಪ್ರಕೃತಿಯನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ಸಾಗಿಸುವಲ್ಲಿ ನಮ್ಮೆಲ್ಲರ ಮಹತ್ವದ ಜವಾಬ್ದಾರಿ ಇದೆ. ಈ ಕಾರಣಕ್ಕೆ ನಾವು ವರ್ಷಕ್ಕೆ ಒಮ್ಮಯಾದರು ಗಿಡ ನೆಟ್ಟು ಪೋಷಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀಗಂಧ ,ಮಾವು ,ಹಲಸು ಇತ್ಯಾದಿ ಗಿಡಗಳನ್ನು ನೆಡಲಾಯಿತು .
ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಸೇರಿದಂತೆ , ರೋಟರಿ ಕ್ಲಬ್ ನ ಸದಸ್ಯರುಗಳಾದ ಸೋನಿಯಾ ವರ್ಮಾ, ವಿದ್ಯಾ ಕುಮಾರ್, ಶ್ರೀಧರ್ ಕೆ.ವಿ, ವೈಕುಂಠ ಪ್ರಭು , ಶ್ರೀಕಾಂತ್ ಕಾಮತ್ , ಗೋಪಾಲಕೃಷ್ಣ ಗುಲ್ಲೋಡಿ ,ಪ್ರಶಾಂತ್ ಜೈನ್ , ಸ್ಮಿತಾ ಜೈನ್, ಸಾತ್ವಿಕ್ ಜೈನ್, ನಿಯತಿ ಜೈನ್ ಮತ್ತು ಆದರ್ಶ್ ಕಾರಂತ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ