ಬಳ್ಳಾರಿ: ಕುಮಾರಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕಾ ಮಹೋತ್ಸವ

Upayuktha
0

 ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗಲು ವಿನಂತಿ-ಇ.ಒ ಹನುಮಂತಪ್ಪ


ಬಳ್ಳಾರಿ: 
ಬಳ್ಳಾರಿ ನಗರದ ಫೈರ್ ಆಫೀಸ್ ಸಮೀಪದಲ್ಲಿರುವ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿಇಂದು ಮಂಗಳವಾರದಂದು ಆಡಿ ಕೃತಿಕ ಮಹೋತ್ಸವ ಪೂಜೆಗಳನ್ನು ನಡೆಸಲಾಗುವುದೆಂದು ದೇವಸ್ಥಾನದ ಅಧ್ಯಕ್ಷರಾದ ಬಿ ವಿಜಯ್ ಕುಮಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ತಿಳಿಸಿದ್ದಾರೆ.


ತಮಿಳುನಾಡಿನಲ್ಲಿ ಮುರುಗನ್ ಸ್ವಾಮಿ ಅವರಿಗೆ ಈ ಆಡಿ ಕೃತಿಕ ಮಾಸ ಕಾರ್ಯಕ್ರಮ ವಿಶೇಷವಾಗಿ ನೆರೆವೇರಿಸುತ್ತಾರೆ, ಅದೇ ರೀತಿ ಬಳ್ಳಾರಿ ನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಯಿಂದ 6.30 ಗಂಟೆಯವರೆಗೆ ಭಕ್ತರಿಂದ ವಿಶೇಷ ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿ ಭಕ್ತರು ತಂದಿರುವ ಕಾವಡಿಗಳನ್ನು ಸುಬ್ರಹ್ಮಣ್ಯಸ್ವಾಮಿಗೆ ಸಮರ್ಪಿಸಿ ಅಲಂಕಾರ ಪೂಜೆ, ಮಹಾ ಮಂಗಳಾರತಿ ನಡೆಸಿ ನೆರೆದ ಭಕ್ತರಿಗೆ ಅನ್ನದಾನವನ್ನು ನಡೆಸಲಾಗುವುದ ಎಂದು ತಿಳಿಸಿದ್ದಾರೆ.


ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಎಲ್ಲಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಇ.ಒ ಹನುಮಂತಪ್ಪ ತಿಳಿಸಿದ್ದಾರೆ. ಈ ಆಡಿಕೃತಿ ಮಹೋತ್ಸವದಂದು ಕುಮಾರಸ್ವಾಮಿ ಜನ್ಮದಿನದ ಕಾರ್ಯಕ್ರಮವನ್ನು ನೆರವೇರಿಸಿ ಸಂಜೆ ಪಲ್ಲಕ್ಕಿ ಮೆರವಣಿಗೆ ಲಲಿತಾ ಸಹಸ್ರನಾಮ ಪೂಜೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.


ದರ್ಶನಕ್ಕಾಗಿ ಆಗಮಿಸುವ ಭಕ್ತರು ಸಂತಾನ, ಆರೋಗ್ಯ, ಕುಜದೋಷ, ನವಗ್ರಹ ಮತ್ತು ಶನಿ ಮತ್ತು ನಾಗ ದೋಷಗಳು ದೂರವಾಗಿ ಸಕಲ ಸಂಕಷ್ಟದಿಂದ ಪರಿಹಾರ ಸಿಗುವುದೆಂದು ಭಕ್ತರ ನಂಬಿಕೆಯಾಗಿದೆ ಎಂದು ಅವರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top