ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಮಕವಾಚನ ವ್ಯಾಖ್ಯಾನ

Upayuktha
0



ಉಡುಪಿ:
ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ (ರಿ.) ಸರಳೇಬೆಟ್ಟು ಮಣಿಪಾಲ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮ (ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ) "ಆತ್ಮ ವಿಕ್ರಯ" ಎಂಬ ಗಮಕ ವಾಚಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ರತ್ನ ಸಂಜೀವ ಕಲಾಮಂಡಲ ಸರಳೇಬೆಟ್ಟು ಮಣಿಪಾಲ ಇಲ್ಲಿ ನೆರವೇರಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ತಾಲೂಕು ಅಧ್ಯಕ್ಷ ಪ್ರೊ. ಎಂಎಲ್ ಸಾಮಗ, ಗಮಕ ವ್ಯಾಖ್ಯಾನಕಾರರಾದ ಡಾ.ರಾಘವೇಂದ್ರ ರಾವ್, ಗಮಕ ವಾಚಕಿ ಮಂಜುಳಾ ಮಂಚಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕ ಗಣೇಶ್ ಪಾಟೀಲ್ ಹಾಗೂ ರಮಾನಂದ ಸಾಮಂತ್, ಸಂಗೀತ ಶಿಕ್ಷಕಿ ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.


ನರಸಿಂಹ ನಾಯಕ್ ಇವರು ಕಾರ್ಯಕ್ರಮ ನಿರೂಪಿಸಿದರು. ಹಾರ್ಮೋನಿಯಂ ಗುರುಗಳಾದ ನಿತ್ಯಾನಂದ ನಾಯಕ್ ಹಾಗೂ ತಬಲ ಗುರುಗಳಾದ ನಾಗರಾಜ್ ಖಾರ್ವಿ (ಸಂಸ್ಥೆಯ ಶಿಕ್ಷಕರು) ಹಾಗೂ ಇತರರು ಜೊತೆಗಿದ್ದರು.\


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top