ಸತ್ಯಾತ್ಮವಾಣಿ-1: ಮಹಾಭಾರತದ ಹಿರಿಮೆ ಗರಿಮೆ

Upayuktha
0

 


ವೇದವ್ಯಾಸ ದೇವರು ಶ್ರೀಮನ್‌ ಮಹಾಭಾರತದ ರಚನೆಯನ್ನು ಮಾಡಿ ಸಾಧಕರಾದ ಸಜ್ಜನರಿಗೆ ಅನಂತ ಉಪಕಾರಗಳನ್ನು ಮಾಡಿದ್ದಾರೆ. ಬ್ರಹ್ಮದೇವರನ್ನು ಆರಂಭ ಮಾಡಿಕೊಂಡು ತೃಣ ಜೀವದವರೆಗೆ ಎಲ್ಲರಿಗೂ ಸಾಧನೆಯನ್ನು ಮಾಡಲು ಮಾಡುವ ಮಾರ್ಗವನ್ನು ಉಪದೇಶಮಾಡುವ ಗ್ರಂಥ ಮಹಾಭಾರತ, ಭಗವಂತನ ಬಗೆಗೆ ತಿಳಿಯ ಬೇಕಾದ್ದು ಮಹಾಭಾರತ. ದೇವರು ಪ್ರತಿಯೊಂದು ಜೀವಿಯ ಮೇಲೆ ಮಾಡುವ ಉಪಕಾರ ಮಾಡಿದ ಬಗೆಗೆ ಹೇಳುವ ಮಹಾಭಾರತದಿಂದ ಅನೇಕ ಮನಸ್ಸು ಕೇಡಿಸುವ ಸಾಧನಗಳ ಮಧ್ಯ ಸಾಧನೆಯನ್ನು ಮಾಡುವ ಮಾರ್ಗ ಹೇಳುವುದು ಮಹಾಭಾರತ.


ಸರ್ವೋತ್ತಮನಾದ ಭಗವಂತನ ಮಹಿಮೆಯನ್ನು ಹೇಳುವ ಮಹಾಭಾರತ ದೇವತೆಗಳು ಋಷಿ ಮುನಿಗಳು ಹೇಗೆ ಭಗವಂತನ ಮೂಲಕ ಹೇಳುವುದು ಮಹಾಭಾರತ ಹೇಳುತ್ತದೆ. ಮಹಾಭಾರತ ಆಚರಣೆ, ಸಣ್ಣ ಮತ್ತು ದೊಡ್ಡ ತಪಸ್ಸು ಎಲ್ಲವನ್ನೂ ಹೇಳುವುದು ಮಹಾಭಾರತ. ಇದನ್ನು ಬರೆದವರು ವೇದವ್ಯಾಸ ದೇವರು. ಮಹಾಭಾರತದ ರಚನೆಯನ್ನು ಮಾಡಿದವರು ಸ್ವಯಂ ಭಗವಂತನ ರೂಪವೇ ಮೋಕ್ಷವನ್ನೇ ಕೊಡುವ ದೇವರೇ ಮಹಾಭಾರತವನ್ನು ರಚಿಸಿದ ವೇದವ್ಯಾಸ ದೇವರು. ಪ್ರಪಂಚದ ಎಲ್ಲ ವಿಧವಾದ ಜೀವಗಳನ್ನು ಸೃಷ್ಟಿಸಿ ಅವುಗಳ ವ್ಯಾಪಾರ ಮಾಡುವವ ದೇವರೇ, ದೇವರೇ ಹೇಳಿರುವ  ಈ ಗ್ರಂಥವನ್ನು ಬರೆದವರು ಅವರೇ. ಕಿವಿಯಿಂದ ಕೇಳಿ ಬರೆಯುವವ ಕವಿ. ಆದರೆ ತನ್ನ ಜ್ಞಾನದಿಂದ ಪರಮಾತ್ಮ ತಾನೇ ಬೋಧಿಸಿದ ಶಾಸ್ತ್ರ ಹಾಗೂ ಗ್ರಂಥವೇ ಮಹಾಭಾರತ.


ದೇವರು ಮಾಡಿದ ಅನಂತ ಉಪಕಾರಗಳಲ್ಲಿ ಮಹಾಭಾರತವು ಅತೀ ದೊಡ್ಡ ಗ್ರಂಥವನ್ನು ರಚನೆ ಮಾಡಿದ ಸಂಸ್ಕೃತಿಯನ್ನು ನಮಗೆ ನೀಡಿದ ಸನಾತನ, ವೈದಿಕ ಧರ್ಮಕ್ಕೆ ಅತ್ಯಂತ ಅಭಿಮಾನದಿಂದ ತಿಳಿಯಬೇಕಾದ ಗ್ರಂಥವನ್ನು ರಚನೆ ಪರಮಾತ್ಮನೇ ನಿರೂಪಣೆ ಮಾಡಿದ್ದಾನೆ. ಮಹಾಭಾರತ ಗ್ರಂಥದಲ್ಲಿ ಪರಮಾತ್ಮ ಎಲ್ಲವನ್ನೂ ಹೇಳಿದ್ದಾನೆ. ಅವರವರ ಯೋಗ್ಯತೆಗೆ ತಕ್ಕಂತೆ ದೇವರು ಉಪದೇಶಿಸುತ್ತಾನೆ. ದೇವ ಗುರು ಬೃಹಸ್ಪತ್ಯಾಚಾರ್ಯರಿಗೆ ಕೂಡ ಮಹಾಭಾರತ ಸಂಪೂರ್ಣ ಅರ್ಥವಾಗಿಲ್ಲವೆಂದು ಹೇಳುತ್ತಾರೆ. ದೊಡ್ಡ ಗ್ರಂಥ ತಿಳಿಯಲಿಲ್ಲವೆಂದು ಹೇಳಿ ಅದನ್ನು ಕೇಳದೆ ಬಿಡಬಾರದು ಬಾರದು. ಮಹಾಭಾರತವನ್ನು ಜೀವನದಲ್ಲಿ ಒಮ್ಮೆಯಾದರೂ ಶ್ರವಣ ಕೇಳುತ್ತೇವೆ. ದಿನಕ್ಕೆ ಒಮ್ಮೆಯಾದರೂ  ಶ್ರವಣ ಮಾಡುತ್ತೇವೆ. ಮಹಾಭಾರತದ ಒಂದು ಆದರ್ಶವನ್ನಾದರೂ ಜೀವನದಲ್ಲಿ ಅನುಸರಿಸುತ್ತೇವೆ ಎಂದು ಧರ್ಮದ ಅನುಷ್ಠಾನಗಳನ್ನು ಪ್ರಯತ್ನ ಮಾಡುತ್ತೇವೆ ಎಂದು ಸಂಕಲ್ಪ ಮಾಡಿದಾಗ ಭರತ ಭೂಮಿಯಲ್ಲಿ ಹುಟ್ಟಿದ್ದು ಸಾರ್ಥಕ.


ಭಾರತದೇಶದಲ್ಲಿ ಹುಟ್ಟಿದ ನಂತರ  ಹುಟ್ಟಿ ಮಹಾಭಾರತವನ್ನು ಓದದೇ ಇರಬಾರದು. ನಮ್ಮನ್ನೆಲ್ಲ ಕಾಪಾಡುವ ಅವನ ದಯೆ ಕಾರುಣ್ಯವನ್ನು ನಾವು ಸ್ಮರಿಸಬೇಕು. ನಮ್ಮಲ್ಲಿ ನಿಂತು ತಾನೇ ಎಲ್ಲ ಕಾರ್ಯಗಳನ್ನು ನಡೆಸುವ ಪರಮಾತ್ಮನಾದ ಕೃಷ್ಣನ ಹೆಸರು ಕಿವಿಗೆ ಬಿದ್ದಾಗ ಅದರ ಸಂತೋಷ ನಮ್ಮಲ್ಲಿ ಆಗಬೇಕು. ರಾಮ ಮತ್ತು ಕೃಷ್ಣನ ನಾಮಸ್ಮರಣೆಯಲ್ಲಿ ಅನಂದಿಸುವವರು ಧೀರರು.


ಲೌಕಿಕದಲ್ಲೇ ಸುಮ್ಮನೆ ಸಿಕ್ಕಾಗ ಪ್ರೀತಿ ತೋರಿಸುವವರಿಗೆ ಸಾಮಾನ್ಯ ಮಾತು ಆಡಿಸುವವರಿಗೆ ತೋರುವ ಪ್ರೀತಿಗೆ ಅವರಿಗಾಗಿಯೇ ತೋರಿಸುವ ಪ್ರೀತಿ ಹೆಚ್ಚಾಗಿ ಇರುತ್ತದೆ ಅದರಂತೆ, ಸಾಮಾನ್ಯ ಮನುಷ್ಯರಲ್ಲಿ ಇಂತಹ ಗುಣವಿರುವಾಗ ಭಗವಂತನಿಗೆ ನಾವು ಅತ್ಯಂತ ಪ್ರೀತಿ ತೋರಿದಾಗ ಅವನು ನಮಗೆ ಎಷ್ಟು ಪ್ರೀತಿ ತೋರಿಸುತ್ತಾನೆ ಎಂದು ಯೋಚಿಸಬೇಕು. ದಯಾಮಯನಾದ ಪರಮತ್ಮನಲ್ಲಿ ಕಾಮಕ್ಕಾಗಿ ಭಕ್ತಿ ಮಾಡಿದಾಗ ಭಗವಂತ ಮನುಷ್ಯನಿಗೆ  ಬೇಕಾದ್ದು ಮಾತ್ರ ಕೊಡುತ್ತಾನೆ ಆದರೆ ನೀನೇ ಬೇಕು ಎಂದು ನಿಷ್ಕಲ್ಮಶ ಭಾವದಿಂದ ಕೇಳಿದವನಿಗೆ ಎಲ್ಲವನ್ನೂ ಕೋಡುತ್ತಾನೆ. 

ಧರ್ಮವೇ ತಾರಕ ಮೋಕ್ಷ ಸಾಧನ ಮಾಡಿದರೆ ನಿಷ್ಕಾಮ ಧರ್ಮವನ್ನು ಮಹಾಭಾರತ ಹೇಳಿದೆ ಆ ರೀತಿಯ ಧರ್ಮವನ್ನು ಅನುಷ್ಠಾನ ಮಾಡಬೇಕು.


ಸಂಗ್ರಹ ಅಕ್ಷರ ರೂಪ: ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top