ಬಳ್ಳಾರಿ : ಬಳ್ಳಾರಿಯ ಲಯನ್ಸ್ ಕ್ಲಬ್ ಕಂಟೊನ್ಮೆಂಟ್ ನೂತನ ಅಧ್ಯಕ್ಷರಾಗಿ ರಾಜೇಶ್ ಎಂ.ಪಿ ಹಾಗೂ ಕಾರ್ಯದರ್ಶಿಗಳಾಗಿ ಜಿ.ಶ್ರೀನಿವಾಸರೆಡ್ಡಿ, ಕೋಶಾಧಿಕಾರಿಯಾಗಿ ಸೂರಜಮಲ್ ಏಕಗ್ರೀವವಾಗಿ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಇನ್ಸಾಲೇಶನ್ ಆಫೀಸರ್ ಗುರುರಾಜ್ ಬಹದ್ದೂರ್, ಜೋನಲ್ ಚೇರ್ ಪರ್ಸನ್ ರಾಜಶೇಖರ್ ಲಯನ್ಸ್ ಕ್ಲಬ್‌ನ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಬಿಐಟಿಎಂ ಎಂಬಿಎ ಹೆಚ್‌ಓಡಿ ಡಾಕ್ಟರ್ ಜ್ಯೋತಿ ಡಿಸೋಜಾ ಮಾತನಾಡಿ ಲಯನ್ಸ್ ಕ್ಲಬ್ ಸೇವೆಗಳನ್ನು ಸಮಾಜಮುಖಿ ಕಾರ್ಯಗಳನ್ನು ಪ್ರಶಂಶಿಸಿದರು. ಸೀನಿಯರ್ ಲಯನ್ ಮೆಂಬರ್ ರಾಧಾಕೃಷ್ಣನ್ ಕ್ಲಬ್ಬಿನ ಸೇವೆಗಳನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ಸದಸ್ಯರಾದ ಸೆಂತಿಲ್ ಕುಮಾರ್, ಶ್ರೀಲತಾ ರಾವ್, ಜವೇರಿಲಾಲ್, ಭರತ್, ಷಣ್ಮುಖ, ಸುಧಾಕರ್ ಡಿಓ ನೂತನ ಸದಸ್ಯರಾಗಿ ನಾಗರಾಜ ರೆಡ್ಡಿ, ಶಂಕರ್, ವೆಂಕಟೇಶ್, ಶಿವಕುಮಾರ್ ಸೇರಿದ್ದಾರೆ, ಅಧ್ಯಕ್ಷರಾದ ರಾಜೇಶ್ ಸ್ವಾಗತವನ್ನು ಕೋರಿದರು. ಮುಖ್ಯ ಅತಿಥಿಗಳ ಪರಿಚಯ ಹಾಗೂ ವಂದನಾರ್ಪಣೆಯನ್ನು ಕಾರ್ಯದರ್ಶಿಗಳಾದ ಶ್ರೀನಿವಾಸರೆಡ್ಡಿ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ