ಜ್ಞಾನ -ಭಕ್ತಿಪೂರ್ವಕವಾದ ಶರಣಾಗತಿಯಿಂದ ಶ್ರೇಯಸ್ಸು: ಚಿತ್ರಾಪುರ ಶ್ರೀ ಸಂದೇಶ

Upayuktha
0


ಉಡುಪಿ: ಈಶಾವಾಸ್ಯ ಉಪನಿಷತ್ತಿನ 18 ಶ್ಲೋಕಗಳಲ್ಲಿ ಭಗವಂತನ ಅಷ್ಟ ಕರ್ತೃತ್ವಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ.‌ ಇಂತಹ ಮಹಿಮೆಗಳ ಕುರಿತಾಗಿ ಜ್ಞಾನ ಪಡೆದು ನಿರ್ವ್ಯಾಜ ಭಕ್ತಿಯಿಂದ ದೇವರಿಗೆ ಶರಣಾಗತಿ ಹೊಂದಿದಾಗ ನಿಶ್ಚಯವಾಗಿಯೂ ಶ್ರೇಯಃಪ್ರಾಪ್ತಿಯಾಗುತ್ತದೆ ಎಂದು ಜಗದ್ಗುರು ಮಧ್ವಾಚಾರ್ಯರೇ ಮೊದಲಾದ ಮಹಾಮಹಿಮರು ತಿಳಿಸಿಕೊಟ್ಟಿದ್ದಾರೆ ಎಂದು ಶ್ರೀ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಹೇಳಿದರು.


ಎರಡು ತಿಂಗಳುಗಳಿಂದ ಎಂಟು ಜನ ಶಿಷ್ಯರಿಗೆ ತಾವು ನಡೆಸಿದ ಈಶಾವಾಸ್ಯ ಉಪನಿಷತ್ತಿನ ಪಾಠದ ಮಂಗಲೋತ್ಸವವನ್ನು ಭಾನುವಾರ ನಡೆಸಿ ಅನುಗ್ರಹ ಸಂದೇಶ ನೀಡಿದರು.


ಇದೇ ರೀತಿಯಾಗಿ ಹತ್ತು ಉಪನಿಷತ್ತುಗಳ ಪಾಠವನ್ನೂ ಯಥಾಮತಿ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.


ಶ್ರೀ ಮಠದಲ್ಲಿ ಈಗಾಗಲೇ ಎಲ್ಲ ವಯೋಮಾನಗಳ ಆಸಕ್ತ ವಿಪ್ರರಿಗೆ ನಿತ್ಯೋಪಯೋಗಿ ಸಾಂಪ್ರದಾಯಿಕ ವಿಧಿ ವಿಧಾನಗಳು, ವೇದ  ಹಾಗೂ ಮಹಾಭಾರತ ತಾತ್ಪರ್ಯ ನಿರ್ಣಯವೇ ಮೊದಲಾದ ಗ್ರಂಥಗಳ ಕುರಿತಾಗಿ ಪಾಠಗಳನ್ನು ನಡೆಸಲಾಗುತ್ತಿದೆ. ಐಟಿ ಬಿಟಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಉದ್ಯಪೊಗ ನಡೆಸುತ್ತಿರುವ ಅನೇಕ  ವಿಪ್ರ ಯುವಕರೂ ಇದರಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಸದ್ಯದಲ್ಲೇ ಶ್ರೀ ಮಠವನ್ನು ನವೀಕರಿಸಿ ಶ್ರೀ ಮಠದ ಆದ್ಯ ಪ್ರವರ್ತಕರಾದ ಶ್ರೀ ವಿಜಯಧ್ವಜ ತೀರ್ಥ ಶ್ರೀಪಾದರ ಹೆಸರಿನಲ್ಲಿ ವಿದ್ಯಾಪೀಠವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನೂ ಶ್ರೀಗಳು ಹೊಂದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top