ಕಾರ್ಕಳ: ನಿಟ್ಟೆ ವಿದ್ಯಾ ಸಂಸ್ಥೆ ಮತ್ತು ನಿಟ್ಟೆ ರೋಟರಿ ಕ್ಲಬ್ ನ ಸಹಯೋಗದಿಂದ ಕಾರ್ಕಳ ತಾಲೂಕಿನ ಕೌಡೂರು ಗ್ರಾಮ ಬೈಲೂರಿನಲ್ಲಿರುವ ಹೊಸ ಬೆಳಕು ಸೇವಾ ಟ್ರಸ್ಟ್ ಗೆ ಜು.12 ರಂದು ಭೇಟಿನೀಡಲಾಗಿದ್ದು ಈ ಸಂಧರ್ಭದಲ್ಲಿ ನಿಟ್ಟೆ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಸತೀಶಕುಮಾರ್, ಕಾರ್ಯದರ್ಶಿ ರೊ. ಡಾ.ರಘುನಂದನ್, ರೊ. ಗೋಪಾಲ ಶೆಟ್ಟಿ ಮತ್ತು ಹೊಸಬೆಳಕು ಸೇವಾ ಟ್ರಸ್ಟ್‌ನ ಸಂಚಾಲಕರು ಉಪಸ್ಥಿತರಿದ್ದರು. ಹೊಸಬೆಳಕು ಸೇವಾ ಟ್ರಸ್ಟ್ ನ ಉದ್ದೇಶ ಸ್ವಂತ ಆಶ್ರಯದಲ್ಲಿ ಹೆಚ್ಚುವರಿ 180 ಜನರಿಗೆ ಆಶ್ರಯ ಒದಗಿಸಿ ಅವರ ಕಾಳಜಿ ನೆರವೇರಿಸುವುದಾಗಿದೆ. ಇವರೊಟ್ಟಿಗೆ ನಿಟ್ಟೆ ವಿದ್ಯಾ ಸಂಸ್ಥೆ ಮತ್ತು ನಿಟ್ಟೆ ರೋಟರಿ ಕ್ಲಬ್ ಜಂಟಿಯಾಗಿ ಕೈ ಜೋಡಿಸಿ ಅಶಕ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ 27 ಮಲಗುವ ಮಂಚವನ್ನು ರೋಟರಿ ಕ್ಲಬ್ ನ ಅಧ್ಯಕ್ಷರು ಹಸ್ತಾಂತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ