ಕಾರ್ಕಳ: ನಿಟ್ಟೆ ವಿದ್ಯಾ ಸಂಸ್ಥೆ ಮತ್ತು ನಿಟ್ಟೆ ರೋಟರಿ ಕ್ಲಬ್ ನ ಸಹಯೋಗದಿಂದ ನಿಟ್ಟೆ ಗ್ರಾಮದ ಆಸುಪಾಸಿನ ಸುಮಾರು 10 ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ನೀಡಲಾಯಿತು. 878 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.
ನಿಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ ಸತೀಶ್ ಕುಮಾರ್, ಕಾರ್ಯದರ್ಶಿ ರೋ ಡಾ. ರಘುನಂದನ್ ಮತ್ತು ಸದಸ್ಯರಾದ ರೋ ಪ್ರಶಾಂತ್ ಕುಮಾರ್, ರೋ ಡಾ. ದಿಲೀಪ್ ಕುಮಾರ್, ರೋ. ಗೋಪಾಲ ಶೆಟ್ಟಿ ವಿತರಣಾ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಂತಹ ಕೊಡುಗೆಯನ್ನು ಪಡೆದ ಮಕ್ಕಳು ಮುಂದೆ ಸಮಾಜಕ್ಕೆ ತನ್ನ ಕೈಲಾದ ಸಹಾಯವನ್ನೀಯಬೇಕೆಂದು ಅಧ್ಯಕ್ಷರು ತಿಳಿಸಿದರು.
ಪ್ರಯೋಜನವನ್ನು ಪಡೆದ ಶಾಲೆಗಳು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ನಿಟ್ಟೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಪರಪ್ಪಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕೆಮ್ಮಣ್ಣು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಬೋರ್ಗಲ್ ಗುಡ್ಡೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಲ್ಲಂಬಾಡಿ ಪದವ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಹಾಳೆಕಟ್ಟೆ ಕಲ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕೈರಬೆಟ್ಟು, ಡಾ. ಎನ್.ಎಸ್.ಎ.ಎಂ ಹಿರಿಯ ಪ್ರಾಥಮಿಕ ಶಾಲೆ-ಬೋಳ ಕೋಡಿ, ಡಾ. ಎನ್.ಎಸ್.ಎ.ಎಂ ಹಿರಿಯ ಪ್ರಾಥಮಿಕ ಶಾಲೆ-ನಿಟ್ಟೆ, ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾರ್ಕಳ ಮೈನ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ