ವಿಜಯನಗರ:ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 5, ಶುಕ್ರವಾರ ಸಂಜೆ ವಿಜಯನಗರದ ಸರಸ್ವತಿನಗರದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ರಾಮ್ ರಕ್ಷಿತ್ ಅವರು ಹರಿದಾಸರ ಪದಗಳನ್ನು ಹಾಗೂ ಅನ್ನಮಾಚಾರ್ಯರ ಕೀರ್ತನೆಗಳನ್ನೂ ಪ್ರಸ್ತುತಪಡಿಸಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀ ಗಿರೀಶ್ ಕೋಳಾಲ, ತಬಲಾ ವಾದನದಲ್ಲಿ ಶ್ರೀ ಶರಣು ಗೋಗಿ ಮತ್ತು ತಾಳದಲ್ಲಿ ಶ್ರೀ ಗುರುಪ್ರಸಾದ್ ಇವರುಗಳು ಸಾಥ್ ನೀಡಿದರು. ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಂದನಾರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ