ಮಾಸ್ಟರ್ ಪ್ರಣವ್ ಅಡಿಗ- ಶ್ರೀಮತಿ ವೀಣಾ ಅಡಿಗ ಮತ್ತು ಶ್ರೀ ಪ್ರಕಾಶ್ ಅಡಿಗ ಅಂಬಲಪಾಡಿ- ಉಡುಪಿಯ ದಂಪತಿಗಳ ಪುತ್ರ. ಆನಂದ ತೀರ್ಥ ವಿದ್ಯಾಲಯದಲ್ಲಿ 8ನೇ ತರಗತಿಯ ವಿದ್ಯಾರ್ಥಿ
ಈತ ವಿದ್ವಾನ್ ಕೆ. ರಾಘವೇಂದ್ರ ರಾವ್ ಮತ್ತು ವಿದ್ವಾನ್ ಕೆ. ರವಿಚಂದ್ರ ಕೂಳುರು ಅವರಲ್ಲಿ ಕಳೆದ 6 ವರ್ಷಗಳಿಂದ ಕೊಳಲು ವಾದನ ಮತ್ತು ಸಂಗೀತಾಭ್ಯಾಸ ಮಾಡುತ್ತಿದ್ದಾನೆ. ಇದಕ್ಕೆ ಮೊದಲು ವಿದುಷಿ ವಾರಿಜಾಕ್ಷಿ ಆರ್. ಭಟ್ ಅವರಿಂದ ಸಂಗೀತ ಕಲಿಯುತ್ತಿದ್ದ.
ಚಿಕ್ಕಂದಿನಿಂದಲೇ ಸಂಗೀತಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವ ಪ್ರಣವ್ ಅಡಿಗ, ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದು, ಹಲವು ಬಹುಮಾನಗಳನ್ನೂ ಗೆದ್ದಿದ್ದಾನೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದಿದ್ದಾನೆ. ಅಲೆವೂರು ಗುಡ್ಡೆಯಂಗಡಿಯಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ವೀಣಾಧರಿ ಸಂಗೀತ ಸಂಸ್ಥೆಯ ವತಿಯಿಂದ ನಡೆದ ಆನ್‌ಲೈನ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕೇರಳದ ತಿರುಚ್ಚಿ ಸಪ್ತಸ್ವರಂಗಳ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ.
ವಿದ್ಯೇಶ ನಾದಾಭಿವಂದನಮ್ ಆನ್‌ಲೈನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪುಣೆಯ ಚಿನ್ಮಯ ನಾದ ಬಿಂದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಚೆನ್ನೈನ ದಿ ಹಿಂದೂ ಪತ್ರಿಕೆ ನಡೆಸಿದ ಮಕ್ಕಳ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಬೆಂಗಳೂರು ಇಸ್ಕಾನ್ ಆಯೋಜಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ ಕೊಳಲುವಾದನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಗುರುವಾಯೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್ ಅಪ್, ಕಾಪು ಬೀಚ್ ಉತ್ಸವದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ.
ಉದಯೋನ್ಮುಖ ಪ್ರತಿಭಾವಂತ ಪ್ರಣವ್ ಅಡಿಗನಿಗೆ ಉಜ್ವಲ ಭವಿಷ್ಯವಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ