ಸುರತ್ಕಲ್:ಇನ್ನರ್ ವೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Upayuktha
0


ಸುರತ್ಕಲ್:
ಸ್ತ್ರೀ ಸಬಲೆಯಾಗಿದ್ದು ಆತ್ಮಸ್ಥೈರ್ಯದಿಂದ ಸಮಾಜದ ಮುಂಚೂಣಿಯಲ್ಲಿ ನಿಂತು ನಾಯಕತ್ವ ನಿರ್ವಹಿಸಬೇಕಾಗಿದೆ. ಸ್ನೇಹ ಮತ್ತು ಸೇವೆಯ ಧ್ಯೇಯದೊಂದಿಗೆ ಮಾನವೀಯ ಸ್ಪಂದನದಿಂದ ಇನ್ನರ್‌ವೀಲ್ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ ಎಂದು ಹಿರಿಯ ಕಲಾವಿದೆ ಗೀತಾ ಸುರತ್ಕಲ್ ನುಡಿದರು. 


ಅವರು ಸುರತ್ಕಲ್ ಇನ್ನರ್ ವೀಲ್ ಕ್ಲಬ್‌ನ 2024- 25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ನೂತನ ಅಧ್ಯಕ್ಷೆಯಾಗಿ ವಸಂತಿ ರಾವ್, ಉಪಾಧ್ಯಕ್ಷೆಯಾಗಿ ವಿದ್ಯಾ ರಾಘವೇಂದ್ರ, ಕಾರ್ಯದರ್ಶಿಯಾಗಿ ಶೈಲಾ ಮೋಹನ್, ಖಜಾಂಜಿಯಾಗಿ ಸುಮಿತ್ರಾ ಆಚಾರ್, ಸಂಪಾದಕಿಯಾಗಿ ಪರಿಮಳ ಪ್ರಶಾಂತ್ ರಾವ್ ಹಾಗೂ ಐ.ಎಸ್.ಒ ಆಗಿ ವೀಣಾ ನಾಗರಾಜ್ ಅಧಿಕಾರ ಸ್ವೀಕರಿಸಿದರು.


ಅಂತರಾಷ್ಟ್ರೀಯ ಇನ್ನರ್‌ವೀಲ್ ಶತಮಾನೋತ್ಸವ ವರ್ಷದಲ್ಲಿ ಸುರತ್ಕಲ್‌ನ ಇನ್ನರ್‌ವೀಲ್ ಕ್ಲಬ್ ನೂರಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ಪೂರೈಸಿ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವುದು ಸಂತಸ ತಂದಿದೆ ಎಂದು ನಿಕಟಪೂರ್ವ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ನುಡಿದರು. ನೂತನ ಅಧ್ಯಕ್ಷೆ ವಸಂತಿ ರಾವ್  ಕಾರ್ಯಯೋಜನೆಗಳನ್ನು ತಿಳಿಸಿದರು.


ಇನ್ನರ್‌ವೀಲ್ ಜಿಲ್ಲೆ 318ರ ಕಾರ್ಯದರ್ಶಿ ರಜನಿ ಭಟ್ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟು ಇನ್ನರ್‌ವೀಲ್ ಕ್ಲಬ್   ಸ್ತ್ರೀಯರಲ್ಲಿ ನಾಯಕತ್ವಗುಣ ವರ್ಧನೆಯೊಂದಿಗೆ ಸಮಾಜ ಸೇವೆಗೂ ಅವಕಾಶಕಲ್ಪಿಸಿಕೊಡುತ್ತಿದೆ ಎಂದರು.


ಇನ್ನರ್‌ವೀಲ್ ಜಿಲ್ಲೆ 318ರ ಇಎಸ್‌ಒ ಚಿತ್ರಾ ರಾವ್ ಹಾಗೂ ಐ.ಎಸ್.ಒ ದೀಪಾ ಭಂಡಾರಿ ಶುಭ ಹಾರೈಸಿದರು. ಸುರತ್ಕಲ್ ರೋಟರಿ ಕ್ಲಬ್‌ನ ಅಧ್ಯಕ್ಷ ಐ ಸಂದೀಪ್ ರಾವ್ ಇನ್ನರ್‌ವೀಲ್‌ನ ಗೃಹ ಪತ್ರಿಕೆ ಸುರಭಿಯನ್ನು ಅನಾವರಣಗೊಳಿಸಿದರು.


ಸೇವಾ ಕಾರ್ಯಕ್ರಮವಾಗಿ ಮಹಿಳೆಯೊರ್ವರಿಗೆ ತರಕಾರಿ ಗಾಡಿ, ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ವೈದ್ಯಕೀಯ  ಸಹಾಯ ನಿಧಿಗಳನ್ನು ವಿತರಿಸಲಾಯಿತು. ಶುಭ ಜಗದೀಶ್ ಸೇವಾ ಯೋಜನೆಗಳ ವಿವರಗಳನ್ನು ನೀಡಿದರು.


ನೂತನ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ಡಾ. ಶಶಿಕಲಾ ಹಾಗೂ ಯಮುನಾ ರಾವ್ ನೂತನ ಸದಸ್ಯರನ್ನು ಪರಿಚಯಿಸಿದರು. ನಿರ್ಗಮನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಪಾವನ ವಾರ್ಷಿಕ ವರದಿ ಮಂಡಿಸಿದರು. ಶುಭದಾ ಭಟ್ ಸಂದೇಶ ವಾಚಿಸಿದರು. ವೀಣಾ ನಾಗರಾಜ್ಅ ತಿಥಿಗಳನ್ನು ಪರಿಚಯಿಸಿದರು. ಡಾ. ರೇಷ್ಮಾ ಕೆ. ರಾವ್ ಮತ್ತು ಪರಿಮಳಾ ಪ್ರಶಾಂತ್  ರಾವ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಪಿ. ಶೆಟ್ಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top