ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 9 ರಿಂದ 12ರ ವರೆಗೆ ರಾಜಾಜಿನಗರದ 3ನೇ ಬಡಾವಣೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜುಲೈ 9, ಮಂಗಳವಾರ, ಸಂಜೆ 6-00ಕ್ಕೆ : ಶ್ರೀಮತಿ ವಾಣಿ ಮತ್ತು ಸಂಗಡಿಗರಿಂದ "ಭಜನೆ", 7-00ಕ್ಕೆ : ಮ||ಶಾ||ಸಂ|| ಶ್ರೀ ರಾಮವಿಠಲಾಚಾರ್ಯರಿಂದ "ಧಾರ್ಮಿಕ ಪ್ರವಚನ".
ಜುಲೈ 10, ಬುಧವಾರ, ಸಂಜೆ 6-00ಕ್ಕೆ : ಶ್ರೀ ಸುರಭಿ ಗಾನ ಮಂಡಲಿಯ ಸದಸ್ಯರಿಂದ "ಭಜನೆ", 7-00ಕ್ಕೆ : ಮ||ಶಾ||ಸಂ|| ಶ್ರೀ ರಾಮವಿಠಲಾಚಾರ್ಯರಿಂದ "ಧಾರ್ಮಿಕ ಪ್ರವಚನ".
ಜುಲೈ 11, ಗುರುವಾರ, ಸಂಜೆ 6-00ಕ್ಕೆ : ಶ್ರೀ ಆದಿಶಕ್ತಿ ಮಹಿಳಾ ಸಂಘದ ಸದಸ್ಯರಿಂದ "ಭಜನೆ", 7-00ಕ್ಕೆ : ಮ||ಶಾ||ಸಂ|| ಶ್ರೀ ರಾಮವಿಠಲಾಚಾರ್ಯರಿಂದ "ಧಾರ್ಮಿಕ ಪ್ರವಚನ".
ಜುಲೈ 12 ಶುಕ್ರವಾರ, ಸಂಜೆ 6-30ಕ್ಕೆ : ಶ್ರೀಮತಿ ಗೀತಾ ಭತ್ತದ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ".
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಹರಿಯ ಕೃಪೆಗೆ ಪಾತ್ರರಾಗಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ