ಬಳ್ಳಾರಿ: ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

Upayuktha
0


ಬಳ್ಳಾರಿ: 
ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯ ಸುಬ್ಬರಾವ್ ಕ್ಯಾಂಪ್   ಶ್ರೀ ರೇಣುಕಾ ಯಲ್ಲಮ್ಮ ದೇವಿಯ 3 ನೇ ವರ್ಷದ ಜಾತ್ರಾ ಮಹೋತ್ಸವ ಜುಲೈ 30 ರಂದು ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇಗುಲದ ಶ್ರೀ ಸದ್ಗುರು ಜುಮಾರಿ ತಾತ ಅವರು ತಿಳಿಸಿದ್ದಾರೆ. 


ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ  ಬೆಳಿಗ್ಗೆ ವಿಶೇಷ ಪೂಜೆ ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ, ಉಚ್ಚಾಯ ವಿಜೃಂಭಣೆಯಿಂದ ನೆರವೆರಿತು. ಜು.30 ರಂದು ಆಷಾಢ 4ನೇ ಮಂಗಳವಾರ ಸಂಜೆ ಮಹಾ ರಥೋತ್ಸವ, ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಳಸ ಕುಂಭ ಮೆರವಣಿಗೆ ನಡೆಯಲಿದೆ. 


ಜು.31ಕ್ಕೆ ಪಲ್ಲಕ್ಕಿ ಉತ್ಸವ, ನಂತರ ಲಂಕಾ ದಹನ, ಸಂಜೆ ಪಟಾಕಿ ಉತ್ಸವ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆ ಮಹೋತ್ಸವದ ಎಲ್ಲ ಪೂಜೆಗಳು ಶ್ರೀ ಸದ್ಗುರು ಜುಮಾರಿ ತಾತ ಅವರ ನೇತೃತ್ವದಲ್ಲಿ ನಡೆಯಲಿದ್ದು, ಜು.30 ರಂದು ಪದ್ಮಶ್ರೀ ಪುರಸ್ಕೃತರು ಶ್ರೀ ಮಂಜಮ್ಮ ಜೋಗತಿ ಅವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top