ಬಳ್ಳಾರಿ : ಸಮೃದ್ಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಮಗ್ಗಿ ಪುಸ್ತಕ, ಪೆನ್, ಪೆನ್ಸಿಲ್ ಮತ್ತು ನೋಟ್ ಪುಸ್ತಕಗಳನ್ನು ನೀಡಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಮುಂಡ್ರಿಗ ನಾಗರಾಜ್ ಈ ವೇಳೆ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣವು ಅತ್ಯಂತ ಮುಖ್ಯವಾಗಿದ್ದು , ಅವರ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮೃದ್ಧಿ ಸಂಸ್ಥೆಯ ಸರ್ವ ಸದಸ್ಯರು ಉಚಿತವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಹಂಚುತ್ತಿರುವುದು ಶ್ಲಾಘನೀಯ, ಇಂತಹ ಅನೇಕ ಸಾಮಾಜಿಕ ಕಾಳಜಿ ಉಳ್ಳ ಕೆಲಸ ಹೀಗೆಯೇ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗಂಗಾಧರ, ಸೋಮನಗೌಡ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು. ಸಮೃದ್ಧಿ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಮುಂಡ್ರಿಗಿ, ಉಪಾಧ್ಯಕ್ಷ ಹುಲುಗೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೆಗಡೆ, ಖಜಾಂಚಿ ಶ್ರೀನಿವಾಸ್ ಜವೆದಾರ್, ಹಾಗೂ ಸದಸ್ಯರಾದ ವಿಜಯಕುಮಾರ್, ಹೊನ್ನೂರಸ್ವಾಮಿ ಎಸ್‌ಜಿ, ಮಲಿಕೇತಿ ಬಸವರಾಜ್, ಪ್ರಹ್ಲಾದ್ ತಗ್ಗಿನ ಬೂದಿಹಾಳ್, ಬಸಪ್ಪ ಹಾಗೂ ಶಾಲೆಯ ಮುಖ್ಯ ಗುರುಗಳಾದ ರವಿ ಚಳಗುರ್ಕಿ ಮತ್ತು ಶಾಲೆಯ ಸಹ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ