ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಅಗತ್ಯ: ರವಿ ಚೆಳ್ಳಗುರ್ಕಿ

Upayuktha
0


ಬಳ್ಳಾರಿ: 
ಪ್ರತಿ ಮಗುವಿನ ಕಲಿಕಾ ಮಟ್ಟವನ್ನು ಮೌಖಿಕ ಹಾಗೂ ಲಿಖಿತವಾಗಿ ಮುಖಾಮುಖಿ ಪರಿಶೀಲಿಸಿ, ಪ್ರಗತಿಕಂಡರೆ ಪ್ರಶಂಸಿಸಿ, ನ್ಯೂನತೆ ಕಂಡುಬಂದಲ್ಲಿ ಸಲಹೆ ಸೂಚನೆ ಹಾಗೂ ಮಾರ್ಗ ದರ್ಶನ ಮಾಡುತ್ತಿರುವುದು ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.

ತಾಲೂಕಿನ ಸಂಜೀವರಾಯನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ, ಆರನೇ ಹಾಗೂ ಎಂಟನೇ ತರಗತಿ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯವನ್ನು ಮೌಲ್ಯಾಂಕನ ಮಾಡಲು ಬಂದ ತಂಡವನ್ನು ಮಕ್ಕಳ ಸಮ್ಮುಖದಲ್ಲಿ ಪ್ರಾರ್ಥನೆಯಲ್ಲೇ ಸ್ವಾಗತಿಸಿ ಮಾತನಾಡಿದ ಅವರು ಈಗ ನಡೆಯುತ್ತಿರುವುದು ಮೊದಲನೇ ಹಂತ, ನವೆಂಬರ್ ತಿಂಗಳಲ್ಲಿ ಎರಡನೇ ಹಂತ ಹಾಗೂ ಮಾರ್ಚ್ ತಿಂಗಳಲ್ಲಿ ಮೂರನೇ ಹಂತ.ಹೀಗೆ ಮೂರು ಹಂತಗಳಲ್ಲಿ ನಡೆಯುವುದರಿಂದ ಹಂತದಿಂದ ಹಂತಕ್ಕೆ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳಬೇಕು. ಶಿಕ್ಷಕರು ಮೌಲ್ಯಮಾಪನ ತಂಡ ನೀಡಿದ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಪ್ರಗತಿ ಸಾಧಿಸಬೇಕು.


ಪ್ರತಿ ಮಗುವಿಗು ಓದಲು, ಬರೆಯಲು ಹಾಗೂ ಸರಳ ಲೆಕ್ಕಗಳನ್ನು ಮಾಡವಂತೆ ಸಮರ್ಥರನ್ನಾಗಿ ತಯಾರಿ ಮಾಡಬೇಕಾದ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ಪೋಷಕರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು. ಅಂದ್ರಾಳ್ ಸಿ.ಆರ್.  ಪಿ.ಕೇಶವರೆಡ್ಡಿ, ಕಮ್ಮರಚೇಡು ಶಾಲೆಯ ಟಿ.ಜಿ.ಟಿ ಶಿಕ್ಷಕರಾದ ಶಿವಮೂರ್ತಿ, ಎತ್ತಿನಬೂದಿಹಾಳ್ ಶಾಲೆಯ ಶಿಕ್ಷಕರಾದ ರಾಮಕೃಷ್ಣ, ಕುಬೇರ ಮೌಲ್ಯಮಾಪನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top