ಜಾನುವಾರುಗಳಿಗೆ ವೀರ್ಯನಳಿಕೆ ಬಳಸಲು ರೈತರಿಗೆ ಮನವಿ

Upayuktha
0




ಮಂಗಳೂರು: ಜಾನುವಾರುಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಹೆಣ್ಣು ಕರುಗಳ ಜನನಕ್ಕಾಗಿ ತನ್ಮೂಲಕ ರೈತರ ಆದಾಯದ ಹೆಚ್ಚಿಸಲು ಭಾರತ ಸರ್ಕಾರದ ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ  ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಜಾನುವಾರು ಅಭಿವೃದ್ಧಿ ಸಂಸ್ಥೆ ವತಿಯಿಂದ ಅನುಷ್ಠಾನಗೊಳಿಸಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪಶುಸಂಗೋಪನಾ ಇಲಾಖೆಗೆ ಈಗಾಗಲೇ 1500 ಲಿಂಗ ನಿರ್ಧರಿತ ವೀರ್ಯ ನಳಿಕೆಗಳು ಸರಬರಾಜಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡಿಸುವಾಗ ಈ ವೀರ್ಯನಳಿಕೆಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ.


ಪ್ರಯೋಜನಗಳು:

ಲಿಂಗ ವಿಂಗಡಣೆ ಮಾಡಿದ ವೀರ್ಯ ಬಳಸಿ ಹೆಣ್ಣು ಕರುಗಳನ್ನು ಶೇ. 90 ಕ್ಕಿಂತ ಹೆಚ್ಚು ನಿಖರತೆಯಲ್ಲಿ ಪಡೆಯಬಹುದಾದ ವಿನೂತನ ತಂತ್ರಜ್ಞಾನವಾಗಿದೆ. ವಂಶಾವಳಿ ದೃಢೀಕೃತ ಹೋರಿಗಳ ವೀರ್ಯ ಬಳಸುವುದರಿಂದ ಉತ್ಕ್ರಷ್ಟ ಹೆಣ್ಣು ಕರುಗಳ ಜನನವಾಗಲಿದ್ದು, ಗಂಡು ಕರುಗಳ ಸಾಕಾಣಿಕೆಯ ಹೊರೆಯಿಲ್ಲ. ಹೆಣ್ಣು ಕರುಗಳು ಮಾತ್ರ ಇರುವುದರಿಂದ ಉತ್ತಮ ಪೋಷಣೆಯ ಫಲವಾಗಿ ಶೀಘ್ರ ಬೆಳವಣಿಗೆ, ಬೇಗ ಫಲಕ್ಕೆ ಬರುತ್ತವೆ.

 

ನಿಯಮಗಳು:

ಒಂದರಿಂದ ಮೂರನೇ ಕರಾವಿನ ರಾಸುಗಳನ್ನು ಆಯ್ಕೆ ಮಾಡಬೇಕು. ಈ ಲಿಂಗ ನಿರ್ಧರಿತ ಪ್ರತಿ ವೀರ್ಯ ನಳಿಕೆಯ ವೆಚ್ಚ ರೂ.675/- ಆಗಿದ್ದು, ಸರ್ಕಾರದಿಂದ ರೂ.425/- ಸಹಾಯಧನ ಮತ್ತು ರೈತರ ವಂತಿಗೆ ರೂ.250/- ಆಗಿರುತ್ತದೆ. ಒಂದು ರಾಸಿಗೆ ಎರಡು ಬಾರಿ ಲಿಂಗ ನಿರ್ಧರಿತ ವೀರ್ಯನಳಿಕೆಗಳನ್ನು ಬಳಸಲು ಅವಕಾಶವಿರುತ್ತದೆ. ಎರಡನೇ ಕೃತಕ ಗರ್ಭಧಾರಣೆಯ ನಂತರವೂ ಜಾನುವಾರು ಗರ್ಭಧರಿಸಲು ವಿಫಲವಾದಲ್ಲಿ ರೂ.500/- ಹಿಂಪಡೆಯಲು ಫಲಾನುಭವಿಗಳಿಗೆ ಅವಕಾಶವಿರುತ್ತದೆ. ಎರಡನೇ ಗರ್ಭಧಾರಣೆಗೆ ಗಂಡು ಕರು ಜನಿಸಿದ್ದಲ್ಲಿ ರೂ.250/- ಹಿಂಪಡೆಯಲು ಫಲಾನುಭವಿಗಳಿಗೆ ಅವಕಾಶವಿರುತ್ತದೆ.


ವೀರ್ಯನಳಿಕೆಗಳು ಈಗಾಗಲೆ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಲಭ್ಯವಿದ್ದು ರೈತರು ಆದ್ಯತೆಯ ಮೇರೆಗೆ ಈ ವೀರ್ಯನಳಿಕೆಗಳನ್ನು ಉಪಯೋಗಿಸಿ ಉತ್ಕ್ರಷ್ಟ  ಹೆಣ್ಣು ಕರುಗಳನ್ನು ಪಡೆದು ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಸಂಬಂಧಪಟ್ಟ ತಾಲೂಕು ಪಶು ಆಸ್ಪತ್ರೆಗಳನ್ನು ಸಂಪರ್ಕಿಸಲು ಕ ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top