ಸುರತ್ಕಲ್: ಕಾಟಿಪಳ್ಳ ನಮ್ಮ ಹಿಂದೂ ಸಮಾಜ ಉಳಿದರೆ ನಮ್ಮ ಜೀವನ ಪದ್ಧತಿ ನಮ್ಮ ಪೂರ್ವಜರ ಆಚಾರ ವಿಚಾರ ಸಂಪ್ರದಾಯಗಳು ಉಳಿದು ಬೆಳೆದುಕೊಂಡು ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಕಂಕಣಬದ್ಧರಾಗಬೇಕಿದೆ ಎಂದು ಶಾಸಕ ಡಾಕ್ಟರ್ ಭರತ್ ಶೆಟ್ಟಿ ನುಡಿದರು.
ವಿನಾಯಕ ಫ್ರೆಂಡ್ಸ್ ಮೂರನೇ ವಿಭಾಗ- ಕಾಟಿಪಳ್ಳ ಇದರ ವತಿಯಿಂದ ಇಲ್ಲಿನ ಶ್ರೀ ಕೋಡ್ಡಬ್ಬು ದೈವಸ್ಥಾನದ ಬಳಿ ಇರುವ ವಿನಾಯಕ ಮೈದಾನದಲ್ಲಿ 5ನೇ ವರ್ಷದ ತುಳುನಾಡ ತೆನಸ್ ಸಂಭ್ರಮಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಜನಪದ ತಜ್ಞ ಕೆ.ಕೆ ಪೇಜಾವರ ಅವರು, ಆಟಿ ತಿಂಗಳ ಆಚರಣೆಯನ್ನು ಪೂರ್ವಜರು ಜೀವನದಲ್ಲಿ ಅಳವಡಿಸಿಕೊಂಡದ್ದೇಕೆ ಎಂಬುದರ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು.
ಲೋಕೇಶ್ ಬೊಳ್ಳಾಜೆ, ಸ್ಥಳೀಯ ಕಾರ್ಪೊರೇಟರ್ ಮ.ನಾ.ಪಾ, ಬಾಳದಗುತ್ತು ಸಂತೋಷ್ ಎಸ್ ಪೂಂಜಾ, ಮಾಲಕರು ಜೆ.ಎಸ್. ಎಲೆಕ್ಟಿಕಲ್, MRPL, ಶಿವಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಸರಳ ಧೂಮಾವತಿ ದೈವಸ್ಥಾನ, ಕೃಷ್ಣಾಪುರ, ದಯಾಕರ ಪಿ., ಅಧ್ಯಕ್ಷರು, ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ (ರಿ) ಕಾಟಿಪಳ್ಳ, ರವಿ ಶೆಟ್ಟಿ,ಉದ್ಯಮಿ, ಪ್ರಶಾಂತ್ ಮೂಡಾಯಿಕೊಡಿ ಮಾಜಿ ನಾಮನಿರ್ದೇಶಿತ ಕಾರ್ಪೊರೇಟರ್ ಮ.ನ.ಪಾ, ಸವಿತಾ ಭವಾನಿಶಂಕರ್ ಶೆಟ್ಟಿ, ನಿರ್ದೇಶಕರು ಬಾಳ ಬಂಟರ ಸಂಘ ಮಹೇಶ್ ಕರ್ಕೇರ, ಅಧ್ಯಕ್ಷರು, ಶ್ರೀ ಕೋಡಬ್ಬು ದೈವಸ್ಥಾನ, 3ನೇ ವಿಭಾಗ- ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ,ಪ್ರತಿಭಾ ಪುರಸ್ಕಾರ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ