ಸುರಕ್ಷಾದಲ್ಲಿ ಸಸಿ ವಿತರಣೆ

Chandrashekhara Kulamarva
0

 


ಹೊಸಂಗಡಿ: ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ 27ನೆಯ ಸಂಸ್ಥಾಪನಾ ದಿನಾಚರಣೆ   ಅಂಗವಾಗಿ ದಿನಾಂಕ 03/07/2024 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು.

ಸುಮಾರು 50 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.  ವಿದ್ಯಾಧರ್ ಅವರಿಗೆ ನೆಲ್ಲಿಕಾಯಿ ಮತ್ತು ಹಲಸಿನ ಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ ರಾಜಶ್ರೀ  ಮೋಹನ್, ದಂತ ಪರಿಚಾರಕಿಯರಾದ ರಮ್ಯಾ, ಚೈತ್ರಾ, ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.

ಕಳೆದ ಹತ್ತು ವರುಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ನಿರಂತರವಾಗಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ ಮತ್ತು ಜುಲೈ ತಿಂಗಳಿಡೀ ಆಚರಿಸುತ್ತಾ ಬಂದಿದೆ.

إرسال تعليق

0 تعليقات
إرسال تعليق (0)
To Top