ಪುತ್ತೂರು: ನಾಯಿಗಳ ಸಂಖ್ಯೆ ಹೆಚ್ಚಾಗಿ ರಸ್ತೆಗೆ ಬಂದು ವಾಹನಗಳಿಗೆ ಹಾಗೂ ಪಾದಚಾರಿ ಮಕ್ಕಳಿಗೆ ಸಮಸ್ಯೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗೂ ಮಲ್ಪೆ ಮಧ್ವರಾಜ್ ಅನುಮಲ್ ಕೇರ್ ಟ್ರಸ್ಟ್ ವತಿಯಿಂದ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಸೌಲಭ್ಯವನ್ನು ಪೋಳ್ಯದಲ್ಲಿ ಜು.4ರಿಂದ ಜು9ರ ವರೆಗೆ ನಡೆಸಲಾಗುವುದು.
ಸಂತಾನ ಹರಣ ಮಾಡಿಸುವುದರಿಂದ ಮರಿಗಳನ್ನು ದಾರಿಯಲ್ಲಿ ತ್ಯಜಿಸುವುದು ಕಡಿಮೆಯಾಗುತ್ತದೆ. ರೇಬೀಸ್ ರೋಗ ಹರಡುವಿಕೆಯನ್ನು ಕುಂಠಿತಗೊಳಿಸಬಹುದಾಗಿದೆ. ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿ ಸುರಕ್ಷಿತವಾದ ಬಾಳ್ವೆ ಮಾಡಬಹುದೆಂಬ ಕಲ್ಪನೆಯಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಸಂತಾನ ಹರಣ ಚಿಕಿತ್ಸೆ ಮಾಡಲಿಚ್ಚಿಸುವವರು ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಮಮತಾ ರಾವ್ 99022 53064 ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ