ಶ್ರೀ ಧ. ಮಂ. ಪಿಯು ಕಾಲೇಜು: "ಸುಬೋಧಿನಿ" ಡಿಜಿಟಲ್ ಭಿತ್ತಿಪತ್ರಿಕೆ ಬಿಡುಗಡೆ

Upayuktha
0


ಉಜಿರೆ: ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಂ ಅವುಗಳ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಡಿಜಿಟಲ್ ಭಿತ್ತಿಪತ್ರಿಕೆ  "ಸುಬೋಧಿನಿ " ಯನ್ನು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕಲಾ ನಿಕಾಯದ ಡೀನ್ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ಅವರು ಅನಾವರಣಗೊಳಿಸಿ ಶುಭ ಹಾರೈಸಿದರು. 


ಶ್ರೀ.ಧ.ಮ. ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಸುಬೋಧಿನಿ ಡಿಜಿಟಲ್  ಭಿತ್ತಿಪತ್ರಿಕೆಯ  ಪ್ರಧಾನ ಸಂಪಾದಕ ಡಾ. ಪ್ರಸನ್ನ ಕುಮಾರ ಐತಾಳ್, ವಿದ್ಯಾರ್ಥಿ ಸಂಪಾದಕರುಗಳಾದ ವಿಜ್ಞಾನ ವಿಭಾಗದ ಶಮಂತ್ ರಾಜ್ ಕೆ., ವಾಣಿಜ್ಯಶಾಸ್ತ್ರ ವಿಭಾಗದ ಭಾರ್ಗವಿ ಆರ್. ಭಟ್, ಕಲಾ ವಿಭಾಗದ ಶ್ರೇಯಾ ಎಚ್ ಎ. ಹಾಗೂ  ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ, ಉಪಾಧ್ಯಕ್ಷೆ ವೈಷ್ಣವಿ ಭಟ್ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top