ಬಳ್ಳಾರಿ: ಪರಿಶಿಷ್ಟ ವರ್ಗದ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಳ್ಳಾರಿ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ರಾಜ್ಯ ವಾಲ್ಮೀಕಿ ನಿಗಮದ 94 ಕೋಟಿ ರೂಗಳ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಬೆಂಗಳೂರಿನಿಂದ ಎಂಟು ಜನರ ಇಡಿ ಅಧಿಕಾರಿಗಳ ತಂಡ ಇಲ್ಲಿನ ನೆಹರು ಕಾಲೋನಿಯಲ್ಲಿರುವ ನಾಗೇಂದ್ರ ಅವರ ಮನೆಗೆ ಬುಧವಾರ ಮುಂಜಾನೆಯೇ ಆಗಮಿಸಿ ಪರಿಶೀಲನೆ ನಡೆಸಿದೆ.
ಮನೆಯವರು ಇಲ್ಲಿ ಇರದ ಕಾರಣ ಮನೆಯಲ್ಲಿನ ಸಿಬ್ಬಂದಿ ಮತ್ತು ಶಾಸಕ ನಾಗೇಂದ್ರ ಅವರ ಸರ್ಕಾರಿ ಆಪ್ತ ಸಹಾಯಕ ಚೇತನ್ ಅವರನ್ನು ಕರೆಸಿ ಮಾಹಿತಿ ಸಂಗ್ರಹಿಸಿ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಚೇತನ್ ವಿಚಾರಣೆಯಿಂದ ನಾಗೇಂದ್ರ ಆಪ್ತರಲ್ಲಿ ಆತಂಕ ಹೆಚ್ಚಿದೆ. ಚೇತನ್ ಅಷ್ಟೇ ಅಲ್ಲದೇ ನಾಗೇಂದ್ರ ಅವರ ಜೊತೆ ಆಪ್ತರಾಗಿರುವರಿಗೆ ಕರೆ ಮಾಡುತ್ತಿರುವ ಇಡಿ ಅಧಿಕಾರಿಗಳು. ಕೆಲವರು ಬಳ್ಳಾರಿಯಲ್ಲಿ ಇಲ್ಲ ಎಂದು ಉತ್ತರಿಸುತ್ತಿದ್ದಾರಂತೆ. ನೀವು ಇಲ್ಲಿಗೆ ಬರದೇ ಹೋದರೆ ನೋಟೀಸ್ ಕೊಟ್ಟು ಬೆಂಗಳೂರಿಗೆ ಕರೆಸುತ್ತೇವೆ ಎಂದು ಇಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ