ಮತ್ತೆ ಮಂಗಳೂರಿನ ಜನಮನಗೆದ್ದ"ಮೊಗ್ಲಿ"

Upayuktha
0


ಮಂಗಳೂರು: ಕಿಶೋರ ರಂಗ ಪಯಣ 2024, ಕಲಾಭಿ ಮಕ್ಕಳ ರಂಗಭೂಮಿ ಪ್ರಸ್ತುತ ಪಡಿಸಿದ ಭುವನ್ ಮಣಿಪಾಲ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಮೊಗ್ಲಿ’ ನಾಟಕವು ದಿನಾಂಕ 07-07-2024ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾನಿಲಯ) ಸಹೋದಯ ಹಾಲ್ ನಲ್ಲಿ ಪ್ರದರ್ಶನಗೊಂಡಿತು.


ಆಂಗ್ಲ ಭಾಷೆಯ ರುಡ್ಯಾರ್ಡ್ ಕಿಪ್ಲಿಂಗ್ ಅವರ ಜಂಗಲ್ ಬುಕ್ ಈ ನಾಟಕದ ಕಥಾವಸ್ತುವಾಗಿ ಇದರ ಕಥಾ ನಾಯಕ ಮೌಗ್ಲಿ ಯ ಸುತ್ತ ಕಾಡಿನಲ್ಲಿ ನಡೆಯುವ ಸನ್ನಿವೇಶಗಳನ್ನು ಉಪಯೋಗಿಸಿ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳನ್ನು ತೋರಿಸುವ ವಿಶೇಷ ಪ್ರಯತ್ನವನ್ನು ಭುವನ್ ಮಣಿಪಾಲ್ ಇವರ ನಿದ್ದೇಶನದಲ್ಲಿ, ಕಲಾಭಿ ಮಕ್ಕಳ ರಂಗಭೂಮಿಯ ಮ್ಯಾನೇಜರ್ ಆದ ನುಷ್ ಕಾಮತ್ ಅವರ ನೇತೃತ್ವದಲ್ಲಿ ಈ ಪುಟ್ಟ ತಂಡ ಮಾಡಿದೆ. 


ಕಾರ್ಯಕ್ರಮದ ಅಭ್ಯಾಗತರಾಗಿ ಹೋಟೇಲ್ ದೀಪ ಕಂಫರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಊರ್ಮಿಳಾ ರಮೇಶ್, ದೃಶ್ಯ ಕಲಾವಿದರಾದ ಕರಣ್ ಆಚಾರ್ಯ, ಅಮೃತ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಕರ್ನಾಟಕ ಬ್ಯಾಂಕ್ ನ ಉಪ ಮಹಾಪ್ರಬಂಧಕರಾದ ಸುಮನಾ ಘಾಟ್, ಕದ್ರಿ ದಕ್ಷಿಣ ವಾರ್ಡ್ನ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ,ರತ್ನ'ಸ್ ವೈನ್ ಗೇಟ್ ಮಾಲಕರಾದ ಸುಚಿತ್ರ,ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮ್ಯಾನೇಜೈಂಟ್ ಮೆಂಬರ್ ಅಶ್ವಿನಿ ಕಾಮತ್, ಎಸ್ ಡಿ ಎಂ ಶಾಲೆಯ ಪ್ರಾಂಶುಪಾಲರಾದ ಜೋಯ್ ಜೀವನ್ ರೈ, ಲಲಿತಕಲಾ ಆರ್ಟ್ಸ್ ನ ಮಾಲೀಕರಾದ ಧನ್ ಪಾಲ್ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ (ರಿ.) ಇದರ ಅಧ್ಯಕ್ಷರು ಆದ ಚಂಚಲ ತೇಜೋಮಯ, ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ನುಡಿಯನ್ನಿತ್ತರು.


ಸನಾತನ ನಾಟ್ಯಾಲಯದ ನಿರ್ದೇಶಕರು ಆದ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಕಲಾಭಿ ಒಂದು ಕಲಾಪಯಣ, ಕಲೆಯಲ್ಲಿ ಆಸಕ್ತಿ ಉಳ್ಳ ಕಲಾವಿದರನ್ನು ಒಟ್ಟು ಗುಡಿಸಿ ಕಲೆಗಾಗಿ ತುಡಿಯುವ ಯುವ ಮನಸುಗಳನ್ನು ತನ್ನ ಕಲಿಕೆಯೊಂದಿಗೆ ಕಲಾಸಕ್ತಿಯಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಕಲಾಭಿಯ ತಂಡಕ್ಕೆ ಇದೆ ಎಂದು ಶ್ಲಾಘನೀಯ ಮಾತುಗಳನ್ನಾಡಿ ನಾಟಕದ ನಿರ್ದೇಶಕರಾದ ಭುವನ್ ಮಣಿಪಾಲ್ ಹಾಗೂ ಕಲಾಭಿಯ ಸ್ಥಾಪಕರಾದ ಉಜ್ವಲ್ ಯುವಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. 


ಮತ್ತೆ ಮಂಗಳೂರಿನ ಮನಸ್ಸನ್ನ ಮೌಗ್ಲಿ ನಾಟಕ ಗೆಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಪೋಷಕರು ಆಗಮಿಸಿ ಎಲ್ಲಾ ಕಲಾವಿದರಿಗೆ ಶುಭನುಡಿಯನ್ನಿತ್ತರು.


ಅಮೃತ ವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಿದರು. ಕಲಾಭಿಯ ಎಲ್ಲಾ ಪೋಷಕರು ಹಾಗೂ ಪೋಷಕ ಅಧ್ಯಕ್ಷರಾದ ಮಹೇಶ್ ಕಾಮತ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಉತ್ತಮವಾಗಿ ನೆರವೇರಿತು. ಕಲಾಭಿ ಸಂಸ್ಥೆಯ ಕಾರ್ಯದರ್ಶಿಗಳಾದ ಉಜ್ವಲ್ ಯು.ವಿ. ಧನ್ಯವಾದ ಸಮರ್ಪಣೆ ಗೈದರು. ಕಲಾಬಿ ಗೌರವಾಧ್ಯಕ್ಷರಾದ ಸುರೇಶ್ ವರ್ಕಾಡಿಯವರು ಉಪಸ್ಥಿಯಲಿದ್ದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top