ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಅರೋಗ್ಯ ಭಾರತಿ (ಪುತ್ತೂರು ಜಿಲ್ಲೆ) ಸಹಯೋಗದಲ್ಲಿ, ಜು.21, 2ರಂದು ಎರಡು ದಿನಗಳ ಉಚಿತ ಮನೆ ಮದ್ದು ತರಬೇತಿ ಶಿಬಿರ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಈ ಶಿಬಿರ ನಡೆಯಲಿದೆ. ಅರೋಗ್ಯ ಭಾರತಿಯ ರಾಷ್ಟೀಯ ಯೋಗ ಪ್ರಮುಖ್ ಹಾಗೂ ಆಯುರ್ವೇದ ವೈದ್ಯ ಡಾ. ಟಿ. ಎನ್. ಮಂಜುನಾಥ್ ಮತ್ತು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಶಿಬಿರ ನಡೆಸಿಕೊಡಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ಅರೋಗ್ಯ ಭಾರತಿ ಅಧ್ಯಕ್ಷ ಖ್ಯಾತ ನರಮಾನಸಿಕ ತಜ್ಞ ಡಾ. ಗಣೇಶ್ ಪ್ರಸಾದ್ ಮುದ್ರಜೆ ವಹಿಸಲಿದ್ದಾರೆ ಎಂದು ಪುತ್ತೂರು ಜಿಲ್ಲಾ ಅರೋಗ್ಯ ಭಾರತಿ ಕಾರ್ಯದರ್ಶಿ ಗಣೇಶ್ ಭಟ್ ಮುವ್ವಾರು ತಿಳಿಸಿದ್ದಾರೆ
ಸ್ವಸ್ಥ ಭಾರತ್ ಸಂಯೋಜಕ ಹರ್ಷಿತ್ ಬೆಟ್ಟಂಪಾಡಿ ಕಾರ್ಯಕ್ರಮ ಸಂಯೋಜಿಸಲಿದ್ದಾರೆ. ಆಸಕ್ತರು ದಿನಾಂಕ ಜುಲೈ 19ರ ಮೊದಲು ನೋಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ. ನೋಂದಾವಣೆಗೆ ಸಂಪರ್ಕ ಸಂಖ್ಯೆ- 97405 45979/ 90199 34581 / 94838 02117.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ