ಸುರತ್ಕಲ್: ಹಿಂದು ವಿದ್ಯಾದಾಯಿನೀ ಪ್ರೌಢಶಾಲೆಯ ಶಿಕ್ಷಕ- ರಕ್ಷಕ ಸಂಘದ 30ನೇ ವಾರ್ಷಿಕ ಮಹಾಸಭೆ

Upayuktha
0


ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯ ರಕ್ಷಕ -ಶಿಕ್ಷಕ ಸಂಘದ 30ನೇ ವಾರ್ಷಿಕ ಮಹಾ ಸಭೆ ಇಂದು (ಜು.13) ಶಾಲಾ ವಜ್ರ ಮಹೋತ್ಸವ ಸಭಾಂಗಣದಲ್ಲಿ ಜರಗಿತು.


ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಎಚ್.ಆರ್.ಡಿ ಟ್ರೈನರ್, ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ವೃಷಭರಾಜ್ ಜೈನ್ ಇವರು ಅಧ್ಯಾಪಕರು ಮತ್ತು ಹೆತ್ತವರು ಮಕ್ಕಳ ಜೀವನ ರಥದ ಎರಡು ಗಾಲಿಗಳಿದ್ದಂತೆ. ಮಕ್ಕಳನ್ನು ಮಿತ್ರರಾಗಿ ನೋಡಿ ಜೀವನ ಮೌಲ್ಯಗಳನ್ನು ಮಕ್ಕಳಿಗೆ ನೀಡಬೇಕು. ಮಕ್ಕಳ ಕೆಟ್ಟ ವರ್ತನೆಯನ್ನು ಖಂಡಿಸಿ, ವ್ಯಕ್ತಿಯನ್ನಲ್ಲ ಎಂದು ಪ್ರೇರಣಾದಾಯಕ ನುಡಿಗಳನ್ನಾಡಿದರು.


ಬಳಿಕ ಅವರೇ ಬರೆದಿರುವ "ಮಗು ಮನೆಯ ದೀಪ, ಎಣ್ಣೆ ಹೊಯ್ಯುವ ಬನ್ನಿ" ಎಂಬ 125 ಪುಸ್ತಕವನ್ನು ಸೇರಿರುವ ಪೋಷಕರಿಗೆ ಹಾಗೂ ಶಾಲಾ ಗ್ರಂಥಾಲಯಕ್ಕೆ ನೀಡಿದರು.


ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಅವರು ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆವಹಿಸಿ, ಶಿಕ್ಷಕರ ಪಾಠ ನಿರ್ವಹಣೆ ಬಗ್ಗೆ ತಮ್ಮ ಮಕ್ಕಳ ಮಾನಸಿಕ ಪ್ರಗತಿಯನ್ನು ಹೆತ್ತವರು ಪೋಷಕರು ಆದ್ಯತೆ ನೀಡಿ ಗಮನಿಸಬೇಕು. ಯಶಸ್ವಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆತ್ತವರ ಪಾತ್ರ ಬಹುಮುಖ್ಯವಾದದ್ದು. ಶಾಲೆಯ ಬಗ್ಗೆ ಮಮತೆಯನ್ನು ಬೆಳೆಸಿಕೊಂಡು ಒಳ್ಳೆಯ ನಾಗರಿಕರಾಗಬೇಕೆಂದು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.


ವೇದಿಕೆಯಲ್ಲಿ ಶ್ರೀಮತಿ ಕೀರ್ತಿದೇವಿ ವೃಷಭರಾಜ್ ಜೈನ್, ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ದೇವದಾಸ್, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ್, ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕೋಶಾಧಿಕಾರಿ ರಮೇಶ್ ಟಿ.ಎನ್, ರಕ್ಷಕ- ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರುಗಳಾದ ರಘುರಾಮ್ ರಾವ್, ಗಂಗಾಧರ ಪೂಜಾರಿಯವರು ಉಪಸ್ಥಿತರಿದ್ದು ಪ್ರೇರಣಾದಾಯಕ ನುಡಿಗಳನ್ನಾಡಿದರು.


ಶಾಲಾ ಮುಖ್ಯೋಪಾಧ್ಯಾಯರಾದ ಬಾಲಚಂದ್ರ ಕೆ. ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ 2023 -24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನವನ್ನು ಶಾಲೆಯ ಕೆಲವು ಶಿಕ್ಷಕರು ಹಾಗೂ ದಾನಿಗಳು ನೀಡಿದ ಮೊತ್ತದಿಂದ ನೀಡಲಾಯಿತು. ಹಾಗೂ ರಘುರಾಮ್ ರಾವ್ ಇವರ ವತಿಯಿಂದ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಧನವನ್ನು ನೀಡಲಾಯಿತು.


ಶಾಲಾ ರಕ್ಷಕ- ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಪೂಜಾರಿ ಇವರ ಮಗಳು ಶಾಲಾ ಹಳೆ ವಿದ್ಯಾರ್ಥಿನಿ ಎಂ.ಎಸ್ಸಿ ಕೆಮೆಸ್ಟ್ರಿ  ಪದವಿ ಹೊಂದಿ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕುಮಾರಿ ಜಿ.ಡಿ. ಹರ್ಷಿತ ಇವರು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನ್ನ ಬಡಿಸಲು ವೀಲ್ ಹೊಂದಿರುವ ಸುಮಾರು 11 ಸಾವಿರ ಮೌಲ್ಯದ ಸ್ಟೀಲ್   ಟ್ರಾಲಿಯನ್ನು ಶಾಲೆಯ ಮೇಲಿನ ಅಭಿಮಾನದಿಂದ ನೀಡಿದರು.


ಶಾಲೆಯ 35 ಅರ್ಹ ವಿದ್ಯಾರ್ಥಿಗಳಿಗೆ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ರೇಷ್ಮಾ ಇವರ ಸೊಸೆ, ಪ್ರಸ್ತುತ ಮಂಗಳೂರಿನ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಇದರ ಮ್ಯಾನೇಜರ್ ಶ್ರೀಮತಿ ಅನುರಾಧ ಹಾಗೂ ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ. ಇವರ ವತಿಯಿಂದ ನೀಡಿದ ಸಮವಸ್ತ್ರವನ್ನು ವಿತರಿಸಲಾಯಿತು.


ಅಂತಿಮವಾಗಿ ಈ ಸಂದರ್ಭದಲ್ಲಿ 2024-25ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುಜಯ, ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀಲಕ್ಷ್ಮಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ. ಹಾಗೂ ಆಡಳಿತ ಮಂಡಳಿಯವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.


ಕಾರ್ಯಕ್ರಮವನ್ನು ದಿವಸ್ಪತಿ ನಿರೂಪಿಸಿ ಶಾಲಾ ಸಹ ಶಿಕ್ಷಕಿ, ಶ್ರೀಮತಿ ಸುಜಾತ ವಂದಿಸಿದರು, ರಕ್ಷಕ- ಶಿಕ್ಷಕ ಸಂಘದ ವಾರ್ಷಿಕ ವರದಿಯನ್ನು ಶಾಲಾ ಸಹ ಶಿಕ್ಷಕಿ ಶ್ರೀಮತಿ ಪುಷ್ಪ ಕೆ, ಮಂಡಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top