ಸುರತ್ಕಲ್ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Upayuktha
0


ಸುರತ್ಕಲ್: ನಮ್ಮ ಪರಿಸರದ ಜನರ ಹಿತಕ್ಕಾಗಿ ಪ್ರತಿಫಲ ನಿರೀಕ್ಷಿಸದೆ ಮಾಡುವ ಕಾರ್ಯಗಳಿಂದ ದೊರೆಯುವ ಆನಂದ ವಿಶಿಷ್ಟವಾದುದು. ಸಮಾಜ ಸೇವೆಯ ಮೂಲಕ ಸಾಮಾಜಿಕ ಋಣ ತೀರಿಸುವ ರೋಟರಿ ಸಂಸ್ಥೆ ವಿಶ್ವಮಾನ್ಯವಾಗಿದೆ ಎಂದು ಜಿಲ್ಲಾ ರೋಟರಿ 3181ರ 2025-26ರ ಚುನಾಯಿತ ಜಿಲ್ಲಾ ಗವರ್ನರ್ ರೊ. ಪಿ.ಕೆ. ರಾಮಕೃಷ್ಣ ಮೈಸೂರು ನುಡಿದರು. ಅವರು ಸುರತ್ಕಲ್ ರೋಟರಿ ಕ್ಲಬ್‌ನ 2024-25ರ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಜಾಗತಿಕ ರೋಟರಿ ಅನುದಾನಗಳನ್ನು ತರಿಸಿಕೊಳ್ಳುವ ಮೂಲಕ ಶಾಶ್ವತ ಸಮಾಜ ಉಪಯೋಗಿ ಯೋಜನೆಗಳನ್ನು ಕೊಡುಗೆಯಾಗಿ ನೀಡಲು ರೋಟರಿ ಸಂಸ್ಥೆಯಲ್ಲಿ ಅವಕಾಶವಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.


ರೋಟರಿ ವಲಯ – 2ರ ಸಹಾಯಕ ಗವರ್ನರ್ ರೋ. ಕೃಷ್ಣ ಎಂ. ಹೆಗ್ಡೆ ಗೃಹಪತ್ರಿಕೆ ಇ-ಸುಹೃತ್‌ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ನೂತನ ಅಧ್ಯಕ್ಷರಾಗಿ ಸಂದೀಪ್ ರಾವ್ ಇಡ್ಯಾ, ಕಾರ್ಯದರ್ಶಿಯಾಗಿ ನಿತೇಶ್ ಕುಮಾರ್, ಕೋಶಾಧಿಕಾರಿಯಾಗಿ ಚಂದ್ರಕಾಂತ್ ಮರಾಠೆ ಹಾಗೂ ನಿರ್ದೇಶಕರು ಮತ್ತು ಸಮಿತಿ ಅಧ್ಯಕ್ಷರುಗಳು ಅಧಿಕಾರ ಸ್ವೀಕರಿಸಿದರು.


ನಿರ್ಗಮಿತ ಅಧ್ಯಕ್ಷ ಯೋಗೀಶ್  ಸ್ವಾಗತಿಸಿ ಕುಳಾಯಿ ತನ್ನ ಸೇವಾವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿದರು. ನೂತನ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ತಮ್ಮ ಅವಧಿಯ ಕಾರ್ಯ ಯೋಜನೆಗಳನ್ನು ಪ್ರಸ್ತುತಪಡಿಸಿದರು.


ಈ ಸಂದರ್ಭದಲ್ಲಿ ಏಳು ನೂತನ ಸದಸ್ಯರು ಸೇರ್ಪಡೆಗೊಂಡರು. ಡಾಕ್ಟರೇಟ್ ಪದವಿ ಪಡೆದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಅಧ್ಯಾಪಕ ಸಂಯೋಜಕಿ ಡಾ. ಶಿಲ್ಪರಾಣಿ ಅವರನ್ನು ಸಮ್ಮಾನಿಸಲಾಯಿತು. ರೊ. ಕೃಷ್ಣಮೂರ್ತಿ ಪಿ. ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಪದಾಧಿಕಾರಿಗಳಾಗಿ ನೇಮಕಗೊಂಡ ಕ್ಲಬ್‌ನ ಸದಸ್ಯರನ್ನು ಮತ್ತು ಪಿ.ಎಚ್.ಎಫ್. ಕೊಡುಗೆ ನೀಡಿದ ರೊ. ಯಶೋಮತಿ ಅವರನ್ನು ಗೌರವಿಸಲಾಯಿತು. ಇನ್ನರ್ ವೀಲ್ ಕ್ಲಬ್ ಸದಸ್ಯೆ ವಿದ್ಯಾ ಅರವಿಂದ ಭಟ್ ಶುಭ ಹಾರೈಸಿದರು.


ಕಾರ್ಯದರ್ಶಿ ರೊ. ರಮೇಶ್ ರಾವ್ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ನಿತೇಶ್ ಕುಮಾರ್ ವಂದಿಸಿದರು. ಬಿಜು ಪಿಳ್ಳೆ ಕಾರ್ಯಕ್ರಮ ನಿರೂಪಿಸಿದರು.

 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top