ಬೆಂಗಳೂರು :ಸುಗತ ಮಾಸ ಪತ್ರಿಕೆ ಬಿಡುಗಡೆ ಸಮಾರಂಭ

Upayuktha
0


ಬೆಂಗಳೂರು:
ಹೊಸ ಬರಹಗಾರರಿಗೆ ಹಾಗೂ ಅಲಕ್ಷಿತರಿಗೆ ಕೈದೀವಿಗೆಯಾಗಲಿ ಸುಗತ ಪತ್ರಿಕೆ: ಪ್ರೊ.ಮಲ್ಲೇಪುರಂ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಇಲ್ಲಿ, ಇವರ ಸಹಯೋಗದಲ್ಲಿ ಪ್ರೊ.ಮಲ್ಲೇಪುರಂ ಪ್ರತಿಷ್ಠಾನ, ಕಲಬುರ್ಗಿ ಇವರು ಆಯೋಜಿಸಿದ್ದ ಸುಗತ ಮಾಸ ಪತ್ರಿಕೆ ಮಾತನಾಡಿದರು. 


"ಅಮರಸಿಂಹ ಸುಗತ ಎಂಬ ಪದ ಬಳಸಿದವನು. ಅಂದೂ ಬುದ್ಧ, ಇಂದೂ ಬುದ್ಧ, ಮುಂದೆಯೂ ಬುದ್ಧ – ಇದು ಸುಗತ ಪತ್ರಿಕೆಯ ಸಂದೇಶ " ಎಂದು ನುಡಿದರು.


ದಿನಾಂಕ:19.07.2024 ರಂದು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಚೆನ್ನಪ್ಪ ಕಟ್ಟಿ ಸುಗತ ಮಾಸಪತ್ರಿಕೆಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡುತ್ತ ಸುಗತ ಎಂದರೆ ಒಳ್ಳೆಯ ಮಾತು, ಸದ್ವಿಚಾರ ಎಂಬ ಅರ್ಥವಿದೆ, ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಕೊಡುವಲ್ಲಿ ಸುಗತ ಪತ್ರಿಕೆ ಮುಂದಾಗಲಿ ಎಂದು ಹಾರೈಸಿದರು. 


ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ ಪೋತೆಯವರು ಮಾತನಾಡಿ ದೀಪದಿಂದ ದೀಪ ಹಚ್ಚಬೇಕು ಎನ್ನುವ ಮಾತಿನಂತೆ ಸುಗತ ಪತ್ರಿಕೆಯು ರಾಜಧಾನಿಯಲ್ಲಿ ಬಿಡುಗಡೆಯಾಗಿದೆ ರಾಜ್ಯದಾದ್ಯಂತ ಪಸರಿಸಲಿ ಎಂದು ಹಾರೈಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಸಿ.ಬಿ.ಹೊನ್ನುಸಿದ್ದಾರ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, 


ಸುಗತ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಶ್ರೀಶೈಲ ನಾಗರಾಳ, ಸಂಪಾದಕರಾದ ಡಾ.ಸೂರ್ಯಕಾಂತ ಸುಜ್ಯಾತ್, ಮಲ್ಲೇಪುರಂ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎಂ.ಬಿ.ಕಟ್ಟಿ ಎ.ವಿ.ಪಾಟೀಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಗಪ್ಪ ಹೊಸಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top