ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬೀದಿ ನಾಟಕ

Upayuktha
0


ಬಂಟ್ವಾಳ: ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಇದರ ಸಾಲೆತ್ತೂರು ಕಾರ್ಯಕ್ಷೇತ್ರದ  ಕಟಿಲೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ನೀರಿನ ಬಳಕೆ, ಸಂಚಾರ ನಿಯಮದ ಬಗ್ಗೆ ಮನುಷ್ಯನರಿಗೆ ಬರುವ ಕಾಯಿಲೆಗಳ ಬಗ್ಗೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಬರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಂಸಾರ ಕಲಾತಂಡ ಜೋಡುಮಾರ್ಗ ಬಿಸಿ ರೋಡ್ ಇವರಿಂದ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸಾಲೆತ್ತೂರು ವಲಯದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಕ್ಕೂಟ ಅಧ್ಯಕ್ಷರಾದ ಈಶ್ವರ ಪೂಜಾರಿ, ಶೌರ್ಯವಿಪತ್ತು ನಿರ್ವಹಾನ ತಂಡದ ಅಧ್ಯಕ್ಷರಾದ ಪುರುಷೋತ್ತಮ, ಹಿರಿಯ ಕಲಾವಿದರಾದ ಆನಂದ ದೇವಾಡಿಗ, ಸಂಸಾರ ಕಲಾ ತಂಡ ಜೋಡುಮಾರ್ಗ ಇದರ ಮುಖ್ಯಸ್ಥರಾದ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.


ಒಕ್ಕೂಟ ಪದಾಧಿಕಾರಿಗಳು ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸೇವಾಪ್ರತಿನಿಧಿ ಕುಶಲ ಸ್ವಾಗತಿಸಿ, ಪ್ರಮಿತಾ ವಂದಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top