ಮ೦ಗಳೂರು: ಪ್ರಧಾನ ಮ೦ತ್ರಿ ಸೂರ್ಯ ಘರ್ ಯೋಜನೆಗೆ ಮೆಸ್ಕಾ೦ನ 4 ಜಿಲ್ಲೆಗಳಲ್ಲಿ ಸಲ್ಲಿಕೆಯಾದ ಒಟ್ಟು 2717 ಅರ್ಜಿಗಳಲ್ಲಿ 8570.29 ಕಿ.ವ್ಯಾಟ್ ಉತ್ಪಾದನಾ ಸಾಮರ್ಥ್ಯದ 2329 ಅಜಿ೯ಗಳ ಕಾರ್ಯಸಾಧ್ಯತೆ ಅನುಮೋದನೆಗೊ೦ಡಿದೆ.
ಅಲ್ಲದೇ, ಈವರೆಗೆ ಒಟ್ಟು 1344.33 ಕಿ.ವ್ಯಾ. ಉತ್ಪಾದನಾ ಸಾಮರ್ಥ್ಯದ 317 ಯೋಜನೆಗಳ ಅನುಷ್ಠಾನ ಪೂಣ೯ಗೊ೦ಡಿದೆ.
ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಸೂರ್ಯ ಘರ್ ಯೋಜನೆಯ ಅನುಷ್ಠಾನಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೆಚ್ಚಿನ ಒತ್ತು ನೀಡಿದ್ದು, ಅದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಈ ಕುರಿತ ಪ್ರಚಾರಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಜೂ.8 ರ೦ದು ಅಧಿಕೃತ ಚಾಲನೆ ನೀಡಿದ್ದರು.
ದೇಶದ ಒಂದು ಕೋಟಿ ಮನೆಗಳ ಮೇಲ್ಛಾವಣಿಗೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವುದು ಸೂರ್ಯ ಘರ್ ಯೋಜನೆಯ ಗುರಿಯಾಗಿದೆ. ಯೋಜನೆಯು ಗೃಹ ಬಳಕೆ ವಿದ್ಯುತ್ ಸ್ಥಾವರದ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತಿದ್ದು, ಈ ಯೋಜನೆಯಲ್ಲಿ ಸ್ವಂತ ಗೃಹ ಬಳಕೆ (ವಾಸದ ಮನೆಯನ್ನು) ಹೊಂದಿರುವ ಆಸಕ್ತ ಗಾಹಕರು ಅಜಿ೯ ಸಲ್ಲಿಸಬಹುದಾಗಿದೆ.
ಸಹಾಯಧನ
1 ಕಿ.ಲೋ. ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಹಾಯಧನ (ಸಬ್ಸಿಡಿ) ದೊರೆಯುತ್ತಿದ್ದು, 2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಹಾಯಧನ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಹಾಯಧನ ಮಿತಿ 78,000 ರೂ. ದೊರೆಯಲಿದೆ.
ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಗಾಹಕರು pmsuryaghar.gov.in ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಅರ್ಜಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಾಯಿತ ಅರ್ಜಿಗೆ ತಾಂತ್ರಿಕ ಸಿದ್ಧತಾ ವರದಿಯನ್ನು 150 ಕಿ.ವ್ಯಾ. ವರೆಗೆ ಸ್ವಯಂ ಚಾಲಿತವಾಗಿ ನೀಡಲಾಗುತ್ತದೆ. ನಂತರ ಅರ್ಜಿದಾರರು ಪೋರ್ಟಲ್ ನಲ್ಲಿ/ಲಾಗಿನ್ ಆಗಿ. ಪೋರ್ಟಲ್‌ನಲ್ಲಿ ಪ್ರಚುರ ಪಡಿಸಿರುವ ನೊಂದಾಯಿತ ವೆಂಡರ್ (ಏಜನ್ಸಿ) ಆಯ್ಕೆ ಮಾಡಿಕೊಂಡು ಕಾಮಗಾರಿಯನ್ನು ವಹಿಸಬಹುದಾಗಿದೆ. ಕಾಮಗಾರಿ ಮುಗಿದ ಬಳಿಕ ಅಜಿ೯ದಾರರು ಕಾಮಗಾರಿ ಪೂರ್ಣಗೊ೦ಡಿರುವ ಬಗ್ಗೆ ವರದಿಯನ್ನು ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.
ಲಾಭವೇನು?
* ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ.
* ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ.
* ನಿರ್ವಹಣೆ ವೆಚ್ಚ ತೀರಾ ಕಡಿಮೆ.
ಮೆಸ್ಕಾ೦ ವ್ಯಾಪ್ತಿಯ-ಜಿಲ್ಲಾವಾರು ವಿವರ
1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1314 ಅಜಿ೯ಗಳಲ್ಲಿ 1138 ಅರ್ಜಿಗಳ ಅನುಮೋದನೆಗೊ೦ಡಿದ್ದು 4700.08 ಕಿ.ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊ೦ದಿದೆ. 198 ಯೋಜನೆಗಳ ಅನುಷ್ಠಾನ ಪೂರ್ಣಗೊ೦ಡಿದೆ.
2. ಉಡುಪಿ ಜಿಲ್ಲೆಯಲ್ಲಿ 749 ಅರ್ಜಿಗಳ ಪೈಕಿ 658 ಅರ್ಜಿಗಳ ಕಾರ್ಯಸಾಧ್ಯತೆ ಅನುಮೋದನೆಗೊ೦ಡಿದ್ದು 2459.22 ಕಿ.ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊ೦ದಿದೆ. 108 ಯೋಜನೆಗಳ ಅನುಷ್ಠಾನಪೂಣ೯ಗೊ೦ಡಿದೆ.
3. ಶಿವಮೊಗ್ಗ ಜಿಲ್ಲೆಯಲ್ಲಿ 411 ಅರ್ಜಿಗಳಲ್ಲಿ 325 ಅರ್ಜಿಗಳ ಕಾರ್ಯಸಾಧ್ಯತೆ ಅನುಮೋದನೆಗೊ೦ಡಿದ್ದು 940.02 ಕಿ.ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊ೦ದಿದೆ. 11 ಯೋಜನೆಗಳ ಅನುಷ್ಠಾನ ಪೂರ್ಣಗೊ೦ಡಿದೆ.
4. ಚಿಕ್ಕಮಗಳೂರು ಜಿಲ್ಲೆಯಲ್ಲಿ 243 ಅರ್ಜಿಗಳಲ್ಲಿ 208 ಅರ್ಜಿಗಳ ಕಾರ್ಯಸಾಧ್ಯತೆ ಅನುಮೋದನೆಗೊ೦ಡಿದ್ದು 470.97 ಕಿ.ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊ೦ದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ