ಕಶೆಕೋಡಿ ದೇವಸ್ಥಾನ: ರಥ ನಿರ್ಮಾಣದ ದಡೆ ಮುಹೂರ್ತ

Upayuktha
0


ಕಲ್ಲಡ್ಕ: ಸುಮಾರು 300 ವರ್ಷಗಳ ಇತಿಹಾಸವಿರುವ ಶ್ರೀ ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ನೂತನ ಬ್ರಹ್ಮರಥದ ದಡೆ ಮುಹೂರ್ತವು ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು.


ರಥದ ದಡೆ ಮುಹೂರ್ತವನ್ನು ಐದು ದೇವಸ್ಥಾನಗಳ ಆಡಳಿತ ಮೊಕ್ತೇಸರರು ನೆರವೇರಿಸಿದರು. ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊಗರ್ನಾಡುವಿನ ಆಡಳಿತ ಮೊಕ್ತೇಸರ ಶ್ರೀ ಜನಾರ್ದನ ಭಟ್, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಬಂಟ್ವಾಳದ ಆಡಳಿತ ಮೊಕ್ತೇಸರ ಅಶೋಕ ಶೆಣೈ, ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಮುಲಾರುವಿನ ಆಡಳಿತ ಮೊಕ್ತೇಸರ ಶ್ರೀ ವಾಸುದೇವ ಪ್ರಭು, ಶ್ರೀ ಮಹಮ್ಮಾಯಿ ದೇವಸ್ಥಾನ ಕೂಡಿಬೈಲುವಿನ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಣೈ ಮತ್ತು ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆಯ ಆಡಳಿತ ಮೊಕ್ತೇಸರ ಪದ್ಮನಾಭ ಪ್ರಭು ಇವರೆಲ್ಲ ದಡೆ ಮುಹೂರ್ತದಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲೇಗ ಸಂಜೀವ ನಾಯಕ್, ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್, ಅರ್ಚಕ ನಿತ್ಯಾನಂದ ಭಟ್, ದಯಾನಂದ ಭಟ್, ಆನುವಂಶಿಕ ಮೊಕ್ತೇಸರ ಕಂಟಿಕ ಗೋಪಾಲ ಶೆಣೈ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕಂಟಿಕ ಶಾಂತಾರಾಮ ಶೆಣೈ ಮುಂತಾಗಿ ಸಮಾಜದ ಗಣ್ಯರು, ಊರ ಪರವೂರ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.


ಕಶೆಕೋಡಿ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬ್ರಹ್ಮರಥದ ನಿರ್ಮಾಣ ಕಾರ್ಯವು ನಡೆಯುತ್ತಿದ್ದು, ಬೋಳಿಯಾರು ಶ್ರೀ ವಿಶ್ವಕರ್ಮ ಶಿಲ್ಪಕಲಾ ಕೇಂದ್ರದ ಶಿಲ್ಪಿ ಹರೀಶ್ ಆಚಾರ್ಯ ಮತ್ತು ಬಳಗವು ರಥದ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top