ಬಳ್ಳಾರಿ: ಬಳ್ಳಾರಿಯ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರನ್ನು ಸರ್ಕಾರ ವರ್ಗವಾಣೆ ಮಾಡಿ, ಆ ಸ್ಥಾನಕ್ಕೆ ಡಾ.ಶೋಭಾರಾಣಿ ವಿ.ಜೆ.ಅವರನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.
ಶೋಭಾರಾಣಿ ಅವರು ಸದ್ಯ ಬೃಹತ್ ಬೆಂಗಳೂರಿನ ಮಹಾನಗರ ಪಾಲಿಕೆಯ ಕಾರ್ಯತಂಡ ಹೆಚ್ಚುವರಿ ಡಿಜಿಪಿಯಾಗಿದ್ದರು. 2008 ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿ ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರಿದವರು, ನಂತರ ತುಮಕೂರಿನಲ್ಲಿ ಅಡಿಷನಲ್ ಎಸ್ಪಿಯಾಗಿ ಬಳಿಕ ಹಾಸನದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ರಂಜಿತ್ ಕುಮಾರ್ ಬಂಡಾರು ಅವರಿಗೆ ವರ್ಗಾವಣೆಯ ಸ್ಥಳವನ್ನು ಇನ್ನೂ ತೋರಿಸಿಲ್ಲ ಎಂದು ತಿಳಿದುಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ